ಬೆಂಗಳೂರು, ಮೇ 13 (DaijiworldNews/PY) : ಖ್ಯಾತ ಕೊಳಲುವಾದಕ ಎಸ್.ವಿ.ಭಾಸ್ಕರ್ (54) ಅನಾರೋಗ್ಯದಿಂದ ಇಂದು ಬೆಳಗ್ಗೆ ನಿಧನರಾಗಿದ್ದಾರೆ.
ಎಸ್.ವಿ.ಭಾಸ್ಕರ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ನಂತರ ಅವರು ಬನಶಂಕರಿಯ ಸಾರಕ್ಕಿಯ ತಮ್ಮು ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಅವರು ಇಂದು ಬೆಳಗ್ಗೆ ನಿಧನರಾಗಿದ್ದಾರೆ ಎಂಉ ಅವರ ಕುಟುಂಬಸ್ಥರು ತಿಳಿಸಿದ್ದಾರೆ.
ಎಸ್.ವಿ.ಭಾಸ್ಕರ್ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತ, ನೃತ್ಯ ಹಾಗೂ ಸಂಗೀತ ಕೇತ್ರದಲ್ಲಿ ಕೊಳಲುವಾದನದ ಮೂಲಕ ತಮ್ಮದೇ ಆದ ಛಾಮು ಮೂಡಿಸಿದ್ದರು.
ಇವರು ರಾಷ್ಟ್ರೀಯ, ಅಂತರಾಷ್ಟ್ರೀಯ ದಿಗ್ಗಜ ಗಾಯಕರು ಹಾಗೂ ವಾದ್ಯಗಾರರ ಸಂಗೀತ ಕಛೇರಿಗಳಿಗೆ ಸಾಥ್ ನೀಡಿದ್ದರು. ಯುವ ಪೀಳಿಗೆಗೆ ಸಂಗೀತದ ಧಾರೆ ಎರದು ಕಲೆಯನ್ನು ಬೆಳೆಸುವ ಕಾರ್ಯದಲ್ಲಿ ತೊಡಗಿದ್ದರು. ಸುವರ್ಣ ಕಲಾವಿದರ ಸಂಘ-ಸಂಸ್ಥೆಗಳ ಒಕ್ಕೂಟದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಮೃತರ ಅಂತ್ಯಕ್ರಿಯೆ ಬನಶಂಕರಿಯ ಚಿತಾಗಾರದಲ್ಲಿ ನಡೆಯಿತು.