ಬೆಂಗಳೂರು, ಮೇ 13 (Daijiworld News/MB) : ಮಂಗಳವಾರ ಸಂಜೆ 5ರಿಂದ ಬುಧವಾರ ಮಧ್ಯಾಹ್ನ 12 ಗಂಟೆವರೆಗೆ ರಾಜದಾದ್ಯಂತ 26 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 951 ಕ್ಕೆ ಏರಿಕೆಯಾಗಿದೆ.
ಈ ೨೬ ಪ್ರಕರಣಗಳ ಪೈಕಿ ಬೀದರ್ ಒಂದರಲ್ಲೇ 11ಪ್ರಕರಣ ದೃಢಪಟ್ಟಿದ್ದು ಹಾಸನದಲ್ಲಿ 4, ಬೆಂಗಳೂರು ನಗರ, ಬಳ್ಳಾರಿ, ದಕ್ಷಿಣ ಕನ್ನಡದಲ್ಲಿ ತಲಾ 1, ಉತ್ತರ ಕನ್ನಡ, ಕಲಬುರಗಿ, ದಾವಣಗೆರೆ, ವಿಜಯಪುರದಲ್ಲಿ ತಲಾ 2 ಹೊಸ ಪ್ರಕರಣಗಳು ಪತ್ತೆಯಾಗಿವೆ.
ಕಂಟೈನ್ಮೆಂಟ್ ಝೋನ್ ಕಲಬುರಗಿ ಜಿಲ್ಲೆಯ ನಿವಾಸಿ ರೋಗಿ ಸಂಖ್ಯೆ ಪಿ-927 ವೃದ್ಧನು ಮೇ 11 ರಂದು ಮೃತಪಟ್ಟಿದ್ದು ಪರೀಕ್ಷೆಯಲ್ಲಿ ಕೊರೊನಾ ಇರುವುದು ದೃಢಪಟ್ಟಿದ್ದು ರಾಜ್ಯದಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 32 ಕ್ಕೆ ಏರಿಕೆಯಾಗಿದೆ. 442 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.