ಕ್ಯಾನ್ಬೆರಾ, ಮೇ 13 (DaijiworldNews/PY) : ಲಾಕ್ಡೌನ್ ಪರಿಣಾಮ ಆಸ್ಟ್ರೇಲಿಯಾದಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ನಿಟ್ಟಿನಲ್ಲಿ ಮೇ.21ರಿಂದ ಭಾರತ ಸರ್ಕಾರ 7 ವಿಶೇಷ ವಿಮಾನ ಸೇವೆ ಆರಂಭಿಸಲಿದೆ ಎಂದು ಕ್ಯಾನ್ಬೆರಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಬುಧವಾರ ತಿಳಿಸಿದೆ.
ಭಾರತೀಯರನ್ನು ವಂದೇ ಭಾರತ್ ಮಿಷನ್ ಅಡಿಯಲ್ಲಿ ಏರ್ ಇಂಡಿಯಾ ವಿಮಾನವು ಕರೆತರಲಿದೆ. ವಂದೇ ಭಾರತ್ ಮಿಷನ್ನ ಪ್ರಥಮ ಹಂತದಲ್ಲಿ ಮೇ 21ರಿಂದ 28ರವರೆಗೆ ಏರ್ ಇಂಡಿಯಾ ವಿಮಾನವು ಆಸ್ಟ್ರೇಲಿಯಾದಿಂದ ಭಾರತದ ವಿವಿಧ ನಗರಗಳಿಗೆ ಸೇವೆಯನ್ನು ಪ್ರಾರಂಭಿಸಲಿದೆ ಎಂದು ಆಸ್ಟ್ರೇಲಿಯಾದರಲ್ಲಿರುವ ರಾಯಭಾರಿ ಕಚೇರಿ ಹೇಳಿದೆ.
ಏರ್ ಇಂಡಿಯಾದಲ್ಲಿ ನಿಗದಿತ ಸೀಟ್ಗಳು ಮಾತ್ರ ಲಭ್ಯವಿದ್ದು, ತುರ್ತಾಗಿ ಭಾರತಕ್ಕೆ ಬರಲಿರುವ ಪ್ರಯಾಣಿಕರಗೆ ಆದ್ಯತೆ ನೀಡಲಾಗುವುದು. 24 ಗಂಟೆಗಳೊಳಗೆ ಶಾರ್ಟ್ ಲಿಸ್ಟ್ ಮಾಡಿದ ಪ್ರಯಾಣಿಕರು ಟಿಕೆಟ್ ಖರೀದಿ ಮಾಡದೇ ಇದ್ದಲ್ಲಿ ಆ ಸೀಟ್ ಮತ್ತೊಬ್ಬ ಪ್ರಯಾಣಿಕರಿಗೆ ನಿಡಲಾಗುತ್ತದೆ. ಪ್ರಯಾಣಿಕರೇ ಪ್ರಯಾಣದ ಖರ್ಚನ್ನು ಭರಿಸಬೇಕು. ಇಮೇಲ್ ಮೂಲಕ ಶಾರ್ಟ್ ಲಿಸ್ಟ್ನಲ್ಲಿರುವ ಪ್ರಯಾಣಿಕರಿಗೆ ಮಾಹಿತಿ ನೀಡಲಾಗುವುದು ಎಂದಯ ರಾಯಭಾರಿ ಕಚೇರಿ ತಿಳಿಸಿದೆ.
ಎಲ್ಲಾ ಪ್ರಯಾಣಿಕರನ್ನು ವಿಮಾಣಕ್ಕೆ ಹತ್ತುವ ಮುನ್ನ ವೈದ್ಯಕೀಯ ತಪಾಸಣೆಗ ಒಳಪಡಿಸಲಾಗುತ್ತದೆ ಹಾಗೂ ರೋಗದ ಲಕ್ಷಣ ಇಲ್ಲದೇ ಇರುವ ಪ್ರಯಾಣಿಕರಿಗೆ ಪಾತ್ರವೇ ಪ್ರಯಾಣ ಮಾಡಲು ಅನುಮತಿ ನೀಡಲಾಗುವುದು.
ಸರ್ಕಾರದ ಸೂಚನೆಯಂತೆ ಭಾರತಕ್ಕೆ ಬಂದ ಬಳಿಕ 14 ದಿನ ಕ್ವಾರಂಟೈನ್ನಲ್ಲಿಬೇಕು. 14 ದಿನಗಳ ಬಳಿಕ ಅಗತ್ಯವಿದ್ದರೆ ಕೊರೊನಾ ಪರೀಕ್ಷೆಗೆ ಒಳಪಡಬೇಕು. ಇದರ ಹೊರತಾಗಿ ಪ್ರಯಾಣಿಕರು ಗುರುತಿನ ಕರಾರುಪತ್ರಕ್ಕೆ ಸಹಿ ಹಾಕಬೇಕಿದೆ.
ಹೆತ್ತವರ ಆರೋಗ್ಯ ಸರಿ ಇಲ್ಲ. ಆದಷ್ಟು ಬೇಗ ಊರಇಗೆ ಹೋಗಲು ಕಾತುರನಾಗಿದ್ದೇನೆ ಎಂಬುದಾಗಿ ಸೀಟು ಖಚಿತವಾಗಿಸಲು ಕಾಯುತ್ತಿರುವ ಬ್ರಿಸ್ಬೇನ್ನಲ್ಲಿರುವ ಟೆಕ್ಕಿ ವರುಣ್ ಮಲಿಕ್ ಹೇಳಿದ್ದಾರೆ. ಕೊರೊನಾ ಬಿಕ್ಕಟ್ಟಿನಿಂದಾಗಿ ಭಾರತಕ್ಕೆ ವಾಪಾಸ್ಸಾಗಲು ನೂರಾರು ಜನರು ಕಾಯುತ್ತಿದ್ದಾರೆ ಎಂದು ಮಲಿಕ್ ತಿಳಿಸಿದ್ಧಾರೆ.
ಆಸ್ಟ್ರೇಲಿಯಾದಲ್ಲಿ ಸುಮಾರು 7 ಲಕ್ಷದಷ್ಟು ಭಾರತೀಯರಿದ್ದಾರೆ. ಇಲ್ಲಿ ಸುಮಾರು 7 ಲಕ್ಷದಷ್ಟು ಭಾರತೀಯರಿದ್ದಾರೆ. ಶಿಕ್ಷಣ ಪಡೆಯುತ್ತಿದ್ದಾರೆ. ಆಸ್ಟ್ರೇಲಿಯಾದಲ್ಲಿ ಈವರೆಗೆ 6,972 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 98 ಮಂದಿ ಮೃತಪಟ್ಟಿದ್ದಾರೆ.