ಲಕ್ನೋ, ಮೇ 13 (DaijiworldNews/PY) : ಕೊರೊನಾ ಸೋಂಕಿನಿಂದ ಉಂಟಾಗಿರುವ ಆರ್ಥಿಕ ಹೊರೆಯನ್ನು ನಿಭಾಯಿಸುವ ಸಲುವಾಗಿ ಸರ್ಕಾರ ನೀಡುತ್ತಿರುವ ವಿವಿಧ ಭತ್ಯೆಗಳನ್ನು ರದ್ದು ಮಾಡಲು ಉತ್ತರಪ್ರದೇಶ ಸರ್ಕಾರ ತೀರ್ಮಾನಿಸಿದೆ.
ಈ ಕ್ರಮದಿಂದಾಗಿ ಸರ್ಕಾರ ಕನಿಷ್ಠ 1,500 ಕೋಟಿ ರೂ ಉಳಿತಾಯ ಮಾಡುವ ಉದ್ದೇಶ ಹೊಂದಿದೆ.
ಹಣಕಾಸು ಇಲಾಖೆ ಪ್ರತ್ಯೇಕ ಆದೇಶಗಳ ಮೂಲಕ ವಿವಿಧ ಭತ್ಯೆಗಳನ್ನು ರದ್ದು ಮಾಡಿದೆ. ಎಲ್ಲಾ ಇಲಾಖೆಯ ಕಿರಿಯ ಎಂಜಿನಿಯರ್ಗಳು, ಪಿಡಬ್ಲ್ಯುಡಿ ಸಿಬ್ಬಂದಿ, ನೀರಾವರಿ ಇಲಾಖೆಯ ಅಧಿಕಾರಿಗಳು, ಪೊಲೀಸ್ ಇಲಾಖೆಯ ವಿವಿಧ ವಿಭಾಗಗಳ ಸಿಬ್ಬಂದಿ, ಪಿಂಚಣಿ ದಾಖಲೆಗಳ ಉಸ್ತುವಾರಿ ನೋಡಿಕೊಳ್ಳುವ ಉದ್ಯೋಗಿಗಳ ವಿವಿಧ ಭತ್ಯೆಗಳನ್ನು ರದ್ದುಪಡಿಸಲಾಗಿದೆ.