ಬೆಂಗಳೂರು, ಮೇ 14 (Daijiworld News/MB) : ಅನಾರೋಗ್ಯದಿಂದ ಬಳಲುತ್ತಿದ್ದ ಹಾಸ್ಯನಟ ಮೈಕಲ್ ಮಧು ಅವರು ಬುಧವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.
೫೦ ವರ್ಷದ ಅವರು ಬುಧವಾರ ಮಧ್ಯಾಹ್ನ ಊಟ ಮಾಡಿದ ಬಳಿಕ ಇದ್ದಕ್ಕಿದ್ದಂತೆ ಕುಸಿದುಬಿದ್ದಿದ್ದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಶಿವರಾಜ್ ಕುಮಾರ್ ನಟನೆಯ ಓಂ ಚಿತ್ರದ ಮೂಲಕ ಮೈಕಲ್ ಮಧು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದರು.
ಅವರು ಶ್, ಎಕೆ 47, ಭಜರಂಗಿ, ಅಧ್ವಮೇಧ, ಸುಪ್ರಭಾತ, ಮಿನುಗುತಾರೆ, ಪಾಪಿಗಳ ಲೋಕದಲ್ಲಿ, ಸೂರ್ಯವಂಶ, ನೀಲಾಂಬರಿ, ಯಮಲೋಕದಲ್ಲಿ ವೀರಪ್ಪನ್, ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೊ ಡಿಮ್ಯಾಂಡು ಸೇರಿದಂತೆ ಸುಮಾರು 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು.