ನವದೆಹಲಿ, ಮೇ 14 (Daijiworld News/MB) : ಕೊರೊನಾ ವೈರಸ್ ಇರುವ ಈ ಸಂದರ್ಭದಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ನ್ಯಾಯಾಧೀಶರು ಕೋಟ್ ಮತ್ತು ಗೌನ್ ಧರಿಸದೆ ಬಿಳಿ ಶರ್ಟ್, ಚೂಡಿದಾರ, ಸೀರೆ ತೊಟ್ಟು ಕುತ್ತಿಗೆಗೆ ಬಿಳಿ ನೆಕ್ ಬ್ಯಾಂಡ್ ಹಾಕಬೇಕು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ತಿಳಿಸಿದ್ದಾರೆ.
ಈ ಸಂಬಂಧ ಸುಪ್ರೀಂ ಕೋರ್ಟ್ ಪ್ರಧಾನ ಕಾರ್ಯದರ್ಶಿ ಎಸ್ ಕಲ್ಗೌಂಕರ್ ಸುತ್ತೋಲೆ ಹೊರಡಿಸಿದ್ದು, ಕೊರೊನಾ ಸೊಂಕಿನ ಮುನ್ನೆಚ್ಚರಿಕೆ ಕ್ರಮವಾಗಿ ವಕೀಲರು, ನ್ಯಾಯಾಧೀಶರು ಬಿಳಿ ಶರ್ಟ್, ಸಲ್ವಾರ್ ಕಮೀಜ್ , ಬಿಳಿ ಸೀರೆ, ಕುತ್ತಿಗೆಗೆ ನೆಕ್ ಬ್ಯಾಂಡ್ ಧರಿಸಬಹುದು. ಮುಂದಿನ ಆದೇಶ ಬರುವವರೆಗೂ ಈ ಆದೇಶವು ಜಾರಿಯಲ್ಲಿ ಇರುತ್ತದೆ ಎಂದು ತಿಳಿಸಿದ್ದಾರೆ.
ಶೀಘ್ರವಾಗಿ ವಕೀಲರು ಮತ್ತು ನ್ಯಾಯಾಧೀಶರಿಗೆ ವಸ್ತ್ರ ಸಂಹಿತೆ ಜಾರಿಗೊಳಿಸಲಾಗುವುದು ಎಂದು ಎಸ್ ಎ ಬೊಬ್ಡೆ ಹೇಳಿದ್ದಾರೆ.
ಬುಧವಾರ ಎಸ್ ಎ ಬೊಬ್ಡೆ ಅವರು ನ್ಯಾಯಾಧೀಶರಾದ ಇಂಧು ಮಲ್ಹೊತ್ರ ಮತ್ತು ಹೃಶಿಕೇಶ್ ರಾಯ್ ಅವರ ಜೊತೆ ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿದ್ದರು. ಈ ಸಂದರ್ಭದಲ್ಲಿ ನ್ಯಾಯಾಧೀಶರು ಯಾರೂ ಗೌನ್ ಮತ್ತು ಕೋಟ್ ತೊಟ್ಟಿರಲಿಲ್ಲ.