ಬೆಂಗಳೂರು, ಮೇ 14 (Daijiworld News/MB) : ಅಲ್- ಹಿಂದೂ ಐಎಸ್ ಐಎಸ್ ಬೆಂಗಳೂರು ಮಾಡ್ಯೂಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಶಿವಮೊಗ್ಗದ ನಿವಾಸಿ ಅಬ್ದುಲ್ ಮಥೀನ್ ಅಹ್ಮದ್ ತಹಾ ಬಂಧನಕ್ಕೆ ಕಾರ್ಯಾಚರಣೆ ನಡೆಸುತ್ತಲ್ಲಿದ್ದು ಆತನ ಕುರಿತಾಗಿ ನಂಬಿಕಾರ್ಹ ಮಾಹಿತಿ ನೀಡಿದವರಿಗೆ 3 ಲಕ್ಷ ರೂ. ಬಹುಮಾನವನ್ನು ಘೋಷಣೆ ಮಾಡಿದ್ದಾರೆ.
ಮೆಹಬೂಬಾ ಪಾಶ, ಖಾಜಾ ಮೊಹಿದ್ದೀನ್ ಅಲಿಯಾಸ್ ಜಲಾಲ್ ಮತ್ತು ಅವರ ಆಪ್ತರು ರೂಪಿಸಿರುವ ಐಎಸ್ ಐಎಸ್ ಪ್ರೇರಿತ ಉಗ್ರ ಸಂಘಟನೆ ತಮಿಳು ನಾಡಿನ ಹಿಂದೂ ನಾಯಕನ ಹತ್ಯೆ ಹಿಂದೆ ಇದ್ದು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಮೀನು ಮಾರ್ಕೆಟ್ ರಸ್ತೆ ನಿವಾಸಿಯಾಗಿರುವ ಅಬ್ದುಲ್ ಮಥೀನ್ ಅಹ್ಮದ್ ತಹಾ ಈ ಆರೋಪಿಗಳ ಸ್ನೇಹಿತನಾಗಿದ್ದಾನೆ. ಹಾಗೆಯೇ ಆನ್ಲೈನ್ನಲ್ಲಿ ವಿದೇಶದಿಂದ ನಿರ್ವಹಣೆ ಮಾಡುತ್ತಿದ್ದವರೊಂದಿಗೆ ಸಂಬಂಧ ಹೊಂದಿದ್ದ ಎಂದು ಎನ್ಐಎ ವಕ್ತಾರರು ತಿಳಿಸಿದ್ದಾರೆ.
ತಹಾನ ವಿರುದ್ಧವಾಗಿ ಪ್ರಚೋದನಾಕಾರಿ ಹೇಳಿಕೆ ಹಿನ್ನೆಲೆಯಲ್ಲಿ ಬೆಂಗಳೂರಿನ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಜನವರಿ 10 ರಂದು ಎನ್ ಐಎ ಪೊಲೀಸರು ಎಫ್ ಐಆರ್ ದಾಖಲಿಸಿದ್ದರು.
ಅಪ್ಘಾನಿಸ್ತಾನ ಹಾಗೂ ಸಿರಿಯಾದಲ್ಲಿನ ನಿಷೇಧಿತ ಜಿಹಾದಿ ಸಂಘಟನೆಗಳನ್ನು ಸೇರಿದ ಪಾಶ 2019ರಲ್ಲಿ ಹತ್ಯೆ ಸಂಚು ರೂಪಿಸಲು ಬೆಂಗಳೂರಿನ ಗುರಪ್ಪನಪಾಳ್ಯದ ತನ್ನ ನಿವಾಸದಲ್ಲಿ ಹಲವು ಸಭೆಗಳನ್ನು ನಡೆಸಿದ್ದು ಮಾತ್ರವಲ್ಲದೇ ಉಗ್ರ ಚಟುವಟಿಕೆಗಾಗಿ ಇತರ ಆರೋಪಿಗಳನ್ನು ನೇಮಕ ಮಾಡುತ್ತಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.
ಐಎಸ್ ಐಎಸ್ ಬೆಂಗಳೂರು ಮಾಡ್ಯೂಲ್ ಪ್ರಕರಣದಲ್ಲಿ 12 ಮಂದಿಯನ್ನು ಬಂಧಿಸಲಾಗಿದೆ.