ಮುಂಬೈ, ಮೇ 14 (DaijiworldNews/PY) : ಕೊರೊನಾ ತಡೆಗಟ್ಟುವುದನ್ನು ನಿಯಂತ್ರಿಸುವ ಸಲುವಾಗಿ ನಾಗರಿಕರ ಮನೆ-ಮನೆ ತೆರಳಿ ಅವರನ್ನು ಪರೀಕ್ಷಿಸುವುದು ಅಗತ್ಯವೆಂದು ಅಧಿಕಾರಿಗಳಿಗೆ ನಿರ್ದೇಶನ ಕೋರಿ ಮಾಹಿತಿ ಹಕ್ಕು ಕಾರ್ಯಕರ್ತ ಅನಿಲ್ ಗಲ್ಗಾಲಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಮಂಗಳವಾರ ಬಾಂಬೆ ಹೈಕೋರ್ಟ್ ವಜಾಗೊಳಿಸಿದೆ.
ಇದನ್ನು ಮುಂಬೈಯ ವರ್ಲಿ, ರಾಜಸ್ಥಾನ, ಭಿಲ್ವಾರಾ ಜಿಲ್ಲೆ ಹಾಗೂ ಕೋಲಿವಾಡದಲ್ಲಿ ಯಶಸ್ವಿಯಾಗಿ ಜಾರಿಗೊಳಿಸಿದ್ದನ್ನು ಕಾರ್ಯಕರ್ತರು ತಿಳಿಸಿದರೂ, ಪ್ರಾಯೋಗಿಕವಾಗಿ ನಗರದ ಎಲ್ಲಾ ನಾಗರಿಕರನ್ನು ಪರೀಕ್ಷೆ ಮಾಡುವುದು ಅಸಾಧ್ಯವೆಂದು ನ್ಯಾಯಪೀಠ ಅಭಿಪ್ರಾಯಪಟ್ಟಿದ್ದು, ಅರ್ಜಿಯನ್ನು ಅನುಮತಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಗಲ್ಗಲಿ ಅವರು ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತಾ ಮತ್ತು ನ್ಯಾಯಮೂರ್ತಿ ಎ. ಎ. ಸಯೀದ್ ಅವರ ವಿಭಾಗೀಯ ಪೀಠದ ಮುಂದೆ ವಕೀಲರಾದ ಅರವಿಂದ ತಿವಾರಿ, ದೇವೇಂದ್ರ ಷಾ ಮತ್ತು ಅಟಲ್ ಬಿಹಾರಿ ದುಬೆ ಅವರ ಮೂಲಕ ಸಲ್ಲಿಸಿದ್ದ ಪಿಐಎಲ್ ವಿಚಾರಣೆ ಮಾಡಿದಾಗ, ಕೊರೊನಾ ವೈರಸ್ ನಗರದಲ್ಲಿ ವ್ಯಾಪಿಸುತ್ತಿದೆ. ಅದನ್ನು ನಿಯಂತ್ರಣ ಮಾಡಲು ಅಧಿಕಾರಿಗಳು ಪ್ರಯತ್ನ ನಡೆಸಿದರೂ ಸಾಧ್ಯವಾಗುತ್ತಿಲ್ಲ. ಹಾಗಾಗಿ ಮುಂಬೈ ನಾಗರಿಕರ ಮನೆ-ಮನೆಗೆ ತೆರಳಿ ಅವರನ್ನು ಅವರನ್ನು ಪರೀಕ್ಷಿಸುವುದು ಅಗತ್ಯ ಎನ್ನುವ ಮಾಹಿತಿ ನೀಡಲಾಯಿತು. ಆದರೆ, ಈ ಮಾಹಿತಿಯನ್ನು ರಾಜ್ಯ ಸರ್ಕಾರ ಒಪ್ಪಿಕೊಳ್ಳಲಿಲ್ಲ. ನಗರದ ಜನಸಂಖ್ಯಾ ಪ್ರಮಾಣದ ಕಾರಣ ಭಿಲ್ವಾರ ಮಾದರಿಯನ್ನು ಪುನರಾವರ್ತಿಸಲು ಆಗುವುದಿಲ್ಲ ಎಂದು ತಿಳಿಸಿತು.
ವಾದಗಳನ್ನು ಆಲಿಸಿದ ನಂತರ, ಅರ್ಜಿದಾರರ ವಿಧಾನವನ್ನು ಶ್ಲಾ ಸುವಾಗ, ಭಿಲ್ವಾರಾಗೆ ಮುಂಬೈಯ ಜನಸಂಖ್ಯೆಯನ್ನು ಹೋಲಿಕೆ ಮಾಡಲಾಗದ ಕಾರಣದಿಂದ ಮುಂಬೈಯಲ್ಲಿ ಮನೆ-ಮನೆಗೆ ಹೋಗಿ ನಿರ್ದೇಶನಗಳನ್ನು ನೀಡಲು ಒಲವಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ಪಿಐಎಲ್ ಅರ್ಜಿಯಲ್ಲಿ ಭಿಲ್ವಾರಾದ ಜನಸಂಖ್ಯೆಯ ವಿವರಗಳಿಲ್ಲ. ಭಿಲ್ವಾರಾದಲ್ಲಿ ಒಂದೇ ರೀತಿಯಾದ ಅಥವಾ ಮುಂಬೈಗೆ ಹೋಲುವ ಯಾವುದೇ ವೈಶಿಷ್ಟ್ಯವನ್ನು ಕೂಡಾ ಇದು ಉಲ್ಲೇಖಿಸುವುದಿಲ್ಲ. ಸಾಂಕ್ರಾಮಿಕ ರೋಗದಿಂದ ಉಂಟಾಗುವ ಪರೀಕ್ಷಾ ಸಮಯಗಳಿಗೆ ಸಂಬಂಧಪಟ್ಟಂತೆ, ಮನೆ ಬಾಗಿಲಿಗೆ ಪರೀಕ್ಷಿಸಲು ಸಂಪನ್ಮೂಲಗಳು ವಿರಳವಾಗಬಹುದು ಎಂದು ನ್ಯಾ.ದತ್ತಾ ಹೇಳಿದರು.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಅಥವಾ ವಿಶ್ವ ಆರೋಗ್ಯ ಸಂಸ್ಥೆಯ ಯಾವುದೇ ಮಾರ್ಗಸೂಚಿಗಳನ್ನು ಅಥವಾ ಸಲಹೆಗಳನ್ನು ನಮ್ಮ ಗಮನಕ್ಕೆ ತಂದಿಲ್ಲ. ಇದಕ್ಕೆ ಅಧಿಕೃತ ಪ್ರತಿಸ್ಪಂದಕರು ನಾಗರಿಕರ ಮನೆ-ಮನೆಗಳಿಗೆ ತೆರಳಿ ಪರೀಕ್ಷೆಯನ್ನು ನಡೆಸುವ ಅಗತ್ಯವಿದೆ ಎಂದು ಹೇಳಿದರು. ಆದರೆ, ಪಿಐಎಲ್ ಅರ್ಜಿಯನ್ನು ತಪ್ಪಾಗಿ ಗ್ರಹಿಸಲಾಗಿದ್ದು ಹಾಗೂ ವಜಾಗೊಳಿಸುವ ಹೊಣೆ ನಮ್ಮದಾಗಿದೆ ಎಂದು ನ್ಯಾಯಾಲಯವು ತಿಳಿಸಿದ್ದು ಮನವಿಯನ್ನು ತಿರಸ್ಕರಿಸಿತು.