ಚಿಕ್ಕೋಡಿ, ಮೇ 14 (DaijiworldNews/PY) : 20 ರೂಪಾಯಿಯ ಆಸೆಗಾಗಿ ನಾಲ್ಕು ವರ್ಷದ ಮಗುವನ್ನು ಬಾವಿಗೆ ತಳ್ಳಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಜಾಗನೂರು ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಮೃತಪಟ್ಟ ಮಗುವನ್ನು ದಿವ್ಯಾ ವಿನೋದ ಉಗಡೆ (4) ಎನ್ನಲಾಗಿದೆ.
ಮನೆಯಲ್ಲಿ ಕೊಟ್ಟಿದ್ದ 20 ರೂಪಾಯಿಯನ್ನು ಕೈಯಲ್ಲಿ ಹಿಡುದುಕೊಂಡು ದಿವ್ಯಾ ಅಂಗಡಿಗೆ ಹೊರಟಿದ್ದಳು. ಈ ಸಂದರ್ಭ ದಿವ್ಯಾಳ ಕೈಯಲ್ಲಿರುವ 20 ರೂ. ಇರುವುದನ್ನು ಕಂಡ ಆರೋಪಿ ಪೂಜಾ ದತ್ತಾರಾವ್ ಕಾಂಬಳೆ (25) ದಿವ್ಯಾಳ ಕೈಯಿಂದ ಹಣ ಕಸಿದುಕೊಂಡಿದ್ದಾಳೆ
ದಿವ್ಯಾಳ ಕೈಯಿಂದ ಹಣ ಕಸಿದುಕೊಂಡ ಕೂಡಲೇ ದಿವ್ಯಾ ಅಳಲು ಆರಂಭಿಸಿದ್ದು, ಈ ವಿಷಯ ದೊಡ್ಡ ಸುದ್ದಿಯಾಗುತ್ತದೆ ಎಂದು ಹೆದರಿದ ಪೂಜಾ ಮಗುವನ್ನು ಬಾವಿಗೆ ತಳ್ಳಿ ಹತ್ಯೆ ಮಾಡಿದ್ದಾಳೆ.
ಈ ಘಟನೆ ತಿಳಿದ ಚಿಕ್ಕೋಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಶೀಲನೆ ನಡೆಸಿದ್ದಾರೆ. ಬಳಿಕ ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಪೂಜಾಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.