ತಿರುವಂತಪುರಂ, ಮೇ 14 (DaijiworldNews/PY) : ತನ್ನ ಜೊತೆ ಆಟವಾಡಲು ಬಾರದ ಕಾರಣ ಸಹೋದರಿ ಹಾಗೂ ಆಕೆಯ ನಾಲ್ಕು ಜನ ಸ್ನೇಹಿತರನ್ನು ಎಂದು ಅರೆಸ್ಟ್ ಮಾಡಿ ಎಂದು 8 ವರ್ಷದ ಬಾಲಕನೊಬ್ಬ ಪೊಲೀಸರಿಗೆ ದೂರು ನೀಡಿರುವ ಘಟನೆ ಕೇರಳದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಕೇರಳದ ಉಮಾರ್ ನಿಧಾರ್ ಕೊರೊನಾ ಲಾಕ್ಡೌನ್ ಸಂದರ್ಭ ನನ್ನೊಂದಿಗೆ ಆಟವಾಡಲು ನನ್ನ ಸಹೋದರಿ ಹಾಗು ಆಕೆಯ ನಾಲ್ಕು ಮಂದಿ ಸ್ನೇಹಿತರನ್ನು ಅರೆಸ್ಟ್ ಮಾಡಿ ಎಂದು ದೂರು ನೀಡಿದ್ದಾನೆ. ನನ್ನೊಂದಿಗೆ ಇವರು ಲೂಡೋ, ಕಳ್ಳ ಪೊಲೀಸ್ ಹಾಗೂ ಶಟಲ್ ಕಾಕ್ ಆಡಲು ಬರುವುದಿಲಲ ಎಂದು ದೂರು ನೀಡಿದ್ಧಾನೆ.
ಜಗಳ ನಡೆದ ಸಂದರ್ಭ ಉಮಾರ್ ಸಹೋದರಿ, ನೀನು ಹುಡುಗ ನಮ್ಮೊಂದಿಗೆ ಆಡವಾಡಬೇಡ ಎಂದು ಆಕೆ ಕೋಪದಲ್ಲಿ ಹೇಳಿದ್ದಾಳೆ. ಇದರಿಂದ ಕೋಪಗೊಂಡ ಉಮಾರ್ ತನ್ನ ತಂದೆಯ ಬಳಿ ಹೋಗಿ ದೂರು ನೀಡಿದ್ದಾನೆ. ಅದಕ್ಕೆ ಅವನ ತಂದೆ ಹಾಗಾದರೆ ನೀನು ಅವರ ವಿರುದ್ದ ಪೊಲೀಸರಲ್ಲಿ ದೂರು ಕೊಡು ಎಂದು ಹೇಳಿದ್ದಾರೆ. ಇದನ್ನು ಗಂಭೀರವಾಗಿ ತೆಗೆದುಕೊಂಡ ಉಮಾರ್ ಪೊಲೀಸರಿಗೆ ದೂರು ನೀಡಿದ್ದಾನೆ.
ಯಾವುದೋ ಪ್ರಕರಣದ ವಿಚಾರವಾಗಿ ಮಾಹಿತಿ ಪಡೆದುಕೊಳ್ಳಲು ಮೇ 10ರಂದು ಪೊಲೀಸ್ ಅಧಿಕಾರಿಗಳು ಉಮಾರ್ ನಿಧಾರ್ ಮನೆಯ ಹತ್ತಿರ ಬಂದಿದ್ದಾರೆ. ಈ ಸಂದರ್ಭ ಉಮಾರ್ ತನ್ನ ಕೈಯಾರೆ ಇಂಗ್ಲೀಷ್ನಲ್ಲಿ ದೂರು ಬರೆದು ಪೊಲೀಸರಿಗೆ ನೀಡಿದ್ದಾನೆ. ಆ ಸಂದರ್ಭ ಪೊಲೀಸರು ಬ್ಯುಸಿ ಇದ್ದ ಕಾರಣ ಉಮಾರ್ ನೀಡಿರುವ ಪತ್ರವನ್ನು ತೆಗೆದುಕೊಂಡು ಹೋಗಿದ್ದಾರೆ. ಬಳಿಕ ಆತ ನೀಡಿದ ಪತ್ರವನ್ನು ಓದಿ ಆತನ ಮನೆಗೆ ಬಂದು ಅವನ ಸಮಸ್ಯೆ ಬಗೆಹರಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸಿವಿಲ್ ಪೊಲೀಸ್ ಅಧಿಕಾರಿ ಉಮೇಶ್, ಉಮಾರ್ ದೂರು ನೀಡಿದ ಸಂದರ್ಭ ತಡವಾದ ಕಾರಣ ನಾವು ಹೋಗಿದ್ದೆವು. ಆದರೆ, ಬೆಳಗ್ಗೆ ವಾಪಾಸ್ ಬಂದು ಆತನ ಸಮಸ್ಯೆ ಬಗೆಹರಿಸಿದ್ದೇವೆ. ಉಮಾರ್ನ ಸಹೋದರಿ ಹಾಗೂ ಆಕೆಯ ಸ್ನೇಹಿತರು ಮುಂದಿನ ಬಾರಿ ಆಟವಾಡಲು ಹೋಗುವಾಗ ಉಮಾರ್ನನ್ನು ಜೊತೆಯಲ್ಲಿ ಕರೆದುಕೊಂಡು ಹೋಗಬೇಕು ಎಂದು ತಿಳಿಸಿದ್ದೇವೆ ಎಂದು ಹೇಳಿದ್ದಾರೆ.
ಈ ಸಂದರ್ಭ ಸ್ಥಳದಲ್ಲಿದ್ದ ಉಮಾರ್, ನಾನು ತುಂಬಾ ಸಲ ಅವರಿಗೆ ನನ್ನನ್ನು ಆಟವಾಡಲು ಕರೆದುಕೊಂಡು ಹೋಗಿ ಎಂದು ಹೇಳಿದ್ದೇನೆ. ಆದರೆ, ಅವರು ಕರೆದುಕೊಂಡು ಹೋಗೇ ಇಲ್ಲ ಎಂದು ಹೇಳಿದ್ದಾನೆ. ಆದರೆ, ಪೊಲೀಸರು, ನಾನು ಅವರಿಗೆ ಹೇಳಿದ್ದೇನೆ ಎಂದು ಹೇಳಿದ್ದಾರೆ. ಆಗ ಉಮಾರ್ ಸಹೋದರಿ, ಈ ರೀತಿಯಾಗಿ ಅವನು ದೂರು ನೀಡುತ್ತಾನೆ ಎಂದು ನಾನು ಅಂದಕೊಂಡಿರಲಿಲ್ಲ. ಮುಂದಿನ ಬಾರಿ ಆಟವಾಡಲು ಹೋದಾಗ ಖಂಡಿತವಾಗಿ ನಾನು ಅವನನ್ನು ಕರೆದುಕೊಂಡು ಹೋಗುತ್ತೇನೆ ಎಂದು ತಿಳಿಸಿದ್ದಾಳೆ.