ನವದೆಹಲಿ, ಮೇ 14 (DaijiworldNews/PY) : ಲಾಕ್ಡೌನ್ ಹಿನ್ನೆಲೆ ತಮ್ಮ ಊರುಗಳಿಗೆ ಮರಳಿರುವ ವಲಸೆ ಕಾರ್ಮಿಕರ ಸಂಕಷ್ಟಗಳ ಬಗ್ಗೆ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರು ಆತಂಕ ವ್ಯಕ್ತಪಡಿಸಿದ್ದು, ಈ ವಿಚಾರವಾಗಿ ಸರಣಿ ಟ್ವೀಟ್ ಮಾಡುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಲಾಕ್ಡೌನ್ನಿಂದ ಬಾಧಿತರಾಗಿರುವ ವಲಸೆ ಕಾರ್ಮಿಕರಿಗೆ ಪಿಎಂ-ಕೇರ್ಸ್ನಿಂದ ₹1,000 ಕೋಟಿ ಘೋಷಣೆ ಮಾಡಲಾಗಿದೆ. ಆದರೆ, ಆ ಹಣವನ್ನು ನೇರವಾಗಿ ವಲಸೆ ಕಾರ್ಮಿಕರಿಗೆ ನೀಡಲಾಗುವುದಿಲ್ಲ. ಈ ಹಣವನ್ನು ವಲಸೆ ಕಾರ್ಮಿಕರ ಪ್ರಯಾಣ, ವಸತಿ, ಔಷಧಿ ಹಾಗೂ ಆಹಾರದ ವೆಚ್ಚಗಳನ್ನು ಪೂರೈಕೆ ಮಾಡಲು ರಾಜ್ಯ ಸರ್ಕಾರಗಳಿಗೆ ಕೊಡಲಾಗುತ್ತದೆ. ವಲಸೆಮ ಕಾರ್ಮಿಕರ ಕೈಗೆ ತಲುಪುವುದಿಲ್ಲ. ದಯವಿಟ್ಟಿ ಇಂತಹ ಸಣ್ಣ ತಪ್ಪನ್ನು ಮಾಡಬೇಡಿ ಎಂದು ಹೇಳಿದ್ದಾರೆ.
ತಮ್ಮ ಊರಿಗೆ ಮರಳುವ ಕಾರ್ಮಿಕ ತನ್ನ ಕುಟುಂಬವನ್ನು ಹೇಗೆ ಸಾಗಿಸುತ್ತಾನೆ. ವಲಸೆ ಕಾರ್ಮಿಕರು ಎಲ್ಲಾ ಅಡೆತಡೆಗಳನ್ನು ದಾಟಿ ತನ್ನ ಊರಿಗೆ ವಾಪಾಸ್ಸಾಗಿದ್ದಾನೆ. ತನ್ನ ಹಳ್ಳಿಯಲ್ಲಿ ಆತನಿಗೆ ಉದ್ಯೋಗವಿಲ್ಲ, ಕೆಲಸ ಹಾಗೂ ಆದಾಯವಿಲ್ಲ. ಆತ ಹೇಗೆ ಬದುಕುತ್ತಾನೆ. ತನ್ನ ಕುಟುಂಬವನ್ನು ಹೇಗೆ ಸಾಗಿಸುತ್ತಾನೆ ಎಂದು ಕೇಳಿದ್ದಾರೆ.