ನವದೆಹಲಿ,ಮೇ 14 (Daijiworld News/MSP): ಕ್ವಾರಂಟೈನ್ ಅವಧಿ ಮುಗಿದವರನ್ನು ಬಿಡುಗಡೆ ಮಾಡಲು ಆಗ್ರಹಿಸಿ ತಬ್ಲಿಘಿ ಜಮಾತ್ ಸದಸ್ಯರು ಇಂದು ದೆಹಲಿ ಹೈಕೊರ್ಟ್ ಮೆಟ್ಟಿಲೇರಿದ್ದಾರೆ. ಕಳೆದ 35 ದಿನಗಳಿಂದ ತಬ್ಲಿಘಿ ಜಮಾತ್ ಸದಸ್ಯರು ಕ್ವಾರಂಟೈನ್ ನಲ್ಲಿ ಇದ್ದು ಇನ್ನು ಬಿಡುಗಡೆ ಮಾಡುತ್ತಿಲ್ಲ ಎಂದು ದೆಹಲಿ ಹೈಕೋರ್ಟ್ಗೆ ಮನವಿ ಸಲ್ಲಿಸಲಾಗಿದೆ.
ದೇಶದಾದ್ಯಂತ ಲಾಕ್ಡೌನ್ ಘೋಷಿಸುವ ಅವಧಿಯಲ್ಲಿ ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ತಬ್ಲಿಘಿ ಜಮಾತ್ನ ಧಾರ್ಮಿಕ ಸಮಾವೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಮಾವೇಶದಲ್ಲಿ ದೇಶದ ವಿವಿಧ ಭಾಗಗಳ ಜನರು ಮಾತ್ರವಲ್ಲದೆ ದೇಶದಿಂದಲೂ ಸಾವಿರಾರು ಮುಸ್ಲಿಂ ಸಮುದಾಯದ ಮಂದಿ ಪಾಲ್ಗೊಂಡಿದ್ದರು.
ತಬ್ಲಿಘಿ ಸಮಾವೇಶದಲ್ಲಿ ಪಾಲ್ಗೊಂಡ ಕೆಲವರಿಗೆ ಕೊರೊನಾ ಸೋಂಕು ತಗುಲಿ ಸಾವನ್ನಪ್ಪಿರುವುದು ಖಚಿತವಾಗುತ್ತಿದ್ದಂತೆ, ದೇಶದಾದ್ಯಂತ ಇದು ದೊಡ್ಡ ಮಟ್ಟದ ಸುದ್ದಿಯಾಯಿತು. ಮಾತ್ರವಲ್ಲದೆ ಇತರರಿಗೆ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಬ್ಲಿಘಿ ಸಮಾವೇಶದಲ್ಲಿ ಪಾಲ್ಗೊಂಡವರನ್ನು ಎಲ್ಲರ ಕೊರೊನಾ ಪರೀಕ್ಷೆಗೆ ಮುಂದಾಗಿ ಕ್ವಾರಂಟೈನ್ಗೆ ಒಳಪಡಿಸಿತು
ಈ ನಡುವೆ ಜಮಾತ್ ಸದಸ್ಯರು, "ತಬ್ಲಿಘಿ ಜಮಾತ್ ಸದಸ್ಯರು ಕಳೆದ 35 ದಿನಗಳಿಂದ ಕ್ವಾರಂಟೈನ್ ನಲ್ಲಿದ್ದು ಕೊರೊನಾ ಪರೀಕ್ಷೆಯ ವರದಿಯಲ್ಲಿ ನೆಗೆಟಿವ್ ಬಂದಿದೆ. ಆದರೂ ಕ್ವಾರಂಟೈನ್ ಅವಧಿ ಮುಕ್ತಾಯಗೊಳಿಸಿದ್ದ. ಹೀಗಾಗಿ ಕ್ವಾರಂಟೈನ್ ಅವಧಿ ಮುಗಿಸುವಂತೆ ಸೂಚಿಸಿ" ಎಂದು ದೆಹಲಿ ಹೈಕೋರ್ಟ್ಗೆ ಮನವಿ ಸಲ್ಲಿಸಿದೆ.
ದೆಹಲಿ ಹೈಕೋರ್ಟ್ ಈ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಶುಕ್ರವಾರ ತೆಗೆದುಕೊಳ್ಳಲಿದೆ.