ಕೊಲ್ಲಂ, ಮೇ 14 (Daijiworld News/MSP): ಹಲಸಿನ ಹಣ್ಣಿನ ಸೀಸನ್ ಆರಂಭವಾಗಲಿದೆ. ಕೊರೊನಾ ಸಮಸ್ಯೆಯಿಂದ ಹಲಸು ಪ್ರೀಯರ ಕೈಗೆ ಈ ಹಣ್ಣು ಸಿಗುವುದು ತುಸು ನಿಧಾನವಾದೀತು. ಆದರೆ ಕೊಲ್ಲಂ ನ ಲಾಕ್ ಡೌನ್ ನಡುವೆಯೇ ಕೇರಳದ ಕುಟುಂಬವೊಂದು ಮನೆಯ ಹಿತ್ತಲಲ್ಲಿ ಬೆಳೆದ ಹಲಸಿನಕಾಯಿ ಮುಖಾಂತರ ದಾಖಲೆ ಬರೆಯ ಹೊರಟಿದೆ.
ಕೊಲ್ಲಂನ ಎಡಾಮುಲಕ್ಕಲ್ ಗ್ರಾಮದ ಕುಟುಂಬವೊಂದು ತಮ್ಮ ಹಿತ್ತಲಿನಲ್ಲಿ ಬೆಳೆದ ಬೃಹತ್ ಗಾತ್ರದ ಹಲಸಿಕಾಯಿಯಿಂದ ಸುದ್ದಿಯಲ್ಲಿದೆ. ಬರೋಬ್ಬರಿ ಅರ್ಧ ಕಿಂಟ್ವಾಲ್ ಗಿಂತಲೂ ಹೆಚ್ಚು ತೂಕವಿರುವ ಈ ಹಣ್ಣು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಮತ್ತು ಲಿಮಾ ವರ್ಲ್ಡ್ ರೆಕಾರ್ಡ್ಸ್ ಸೇರುವ ಪ್ರಯತ್ನದಲ್ಲಿದೆ.
ಹಲಸಿನ ಹಣ್ಣು ಬೆಳೆದ ಎಡಾಮುಲಕ್ಕಲ್ನ ಜಾನ್ಕುಟ್ಟಿ ಪ್ರಕಾರ, ಅವರ ಮನೆಯಲ್ಲಿ ಬೆಳೆದ ಹಲಸಿನ ಹಣ್ಣು ಸುಮಾರು 51.4 ಕಿಲೋಗ್ರಾಂಗಳಿಗಿಂತ ಹೆಚ್ಚು ತೂಕವಿದ್ದು ಉದ್ದ 97 ಸೆಂ.ಮೀ. ಉದ್ದವಾಗಿದೆಯಂತೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಜಾನ್ ಕುಟ್ಟಿ " ಈವರೆಗೆ ಪುಣೆಯಲ್ಲಿ 42.72 ಕೆಜಿ ತೂಕದ ಹಲಸಿನಕಾಯಿ ದಾಖಲೆ ಬರೆದಿದೆ ಎಂಬ ಮಾಹಿತಿ ತಿಳಿದುಬಂತು. ಹೀಗಾಗಿ ನಮ್ಮ ಮನೆಯ ಹಿತ್ತಲಲ್ಲಿ ಬೆಳೆದ ಹಲಸಿನಹಣ್ಣುಅದಕ್ಕಿಂತಲೂ ಹೆಚ್ಚು ತೂಕ ಹೊಂದಿರುವುದರಿಂದ , ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಮತ್ತು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ಗಾಗಿ ಅರ್ಜಿ ಸಲ್ಲಿಸಿದ್ದೇನೆ" ಎಂದು ಹೇಳಿದರು.
ಗಿನ್ನೆಸ್ ವಿಶ್ವ ದಾಖಲೆಗಳ ಪ್ರಕಾರ, ಪ್ರಸ್ತುತ 23 ಜೂನ್ 2016 ರಂದು ಮಹಾರಾಷ್ಟ್ರದ ಪುಣೆ ಯಲ್ಲಿ 42.72 ಕೆ.ಜಿಯ 57.15 ಸೆಂ.ಮೀ ಉದ್ದದ ದೈತ್ಯ ಹಲಸಿನಹಣ್ಣು ದಾಖಲೆ ಬರೆದಿದೆ.