ಬೆಂಗಳೂರು, ಮೇ 15 (DaijiworldNews/PY) : ಕೊರೊನಾ ಲಾಕ್ಡೌನ್ ಹಿನ್ನಲೆ ವಿವಿಧ ವರ್ಗಗಳಿಗೆ ನೆರವಾಗುವ ಸಲುವಾಗಿ ಸಿಎಂ ಬಿಎಸ್ವೈ ಅವರು ಮೂರನೇ ಆರ್ಥಿಕ ಪ್ಯಾಕೇಜ್ ಅನ್ನು ಘೋಷಣೆ ಮಾಡಿದ್ದಾರೆ.
ಈ ಮೂರನೇ ಆರ್ಥಿಕ ಪ್ಯಾಕೇಜ್ನಲ್ಲಿ ಮೆಕ್ಕೆಜೋಳ ಬೆಳೆಗಾರರಿಗೆ ತಲಾ ₹5 ಸಾವಿರ ನೆರವು ಘೋಷಣೆ ಮಾಡಲಾಗಿದೆ. ರಾಜ್ಯದಲ್ಲಿ ಸುಮಾರು 10 ಲಕ್ಷ ಬೆಳೆಗಾರರಿದ್ದು, ₹500 ಕೋಟಿ ಇದಕ್ಕೆ ವೆಚ್ಚ ತಗುಲಲಿದೆ. ಸಹಕಾರ ಇಲಾಖೆಯ ವತಿಯಿಂದ ಆಶಾ ಕಾರ್ಯಕರ್ತರಿಗೆ ಒಂದು ಬಾರಿಗೆ ₹3 ಸಾವಿರ ಪ್ರೋತ್ಸಾಹಧನ ಘೋಷಣೆ ಮಾಡಲಾಗಿದೆ. ಒಟ್ಟು ಸುಮಾರು 40 ಸಾವಿರ ಆಶಾ ಕಾರ್ಯಕರ್ತರಿದ್ದು, ₹12.50 ಕೋಟಿ ವೆಚ್ಚ ತಗುಲಲಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.
ಪ್ರಾಕೃತಿಕ ವಿಕೋಪಗಳಲ್ಲಿ ಸಾವನ್ನಪ್ಪುವ ಕುರಿ, ಮೇಕೆ, ಜಾನುವಾರುಗಳಿಗೆ ₹5 ಸಾವಿರ ಪರಿಹಾರ ಮುಂದುವರೆಸಲಾಗುವುದು ಎಂದೂ ಸಿಎಂ ಹೇಳಿದ್ದಾರೆ.