ಮಂಗಳೂರು, ಮೇ 15 (DaijiworldNews/SM): ಕೊರೊನಾ ಏಟಿಗೆ ಶಾಲಾ ಕಾಲೇಜುಗಳು ಮುಚ್ಚಿದ್ದು ಇದೀಗ ಸಾಮಾಜಿಕ ಅಂತರದೊಂದಿಗೆ ಮತ್ತೆ ತರಗತಿಗಳನ್ನು ಆರಂಭಿಸಲು ಸರಕಾರ ಚಿಂತನೆ ನಡೆಸುತ್ತಿದೆ. ಅದರಂತೆ ಸರಕಾರ ಹೊಸ ನಿಯಮಾವಳಿ ಘೋಷಣೆ ಮಾಡಿದೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಅಂದುಕೊಂಡಂತೆ ತರಗತಿಗಳನ್ನು ನಡೆಸುವುದು ಕಷ್ಟಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸರಕಾರ ಕೂಡ ಕೆಲವೊಂದು ನಿರ್ಧಾರಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಈ ಹಿಂದಿನಂತೆ ಏಕಕಾಲದಲ್ಲಿ ತರಗತಿಗಳನ್ನು ನಡೆಸುವುದು ಅಸಾಧ್ಯದ ಮಾತು. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಸಮಯ ಬೇಕಾಗಿದೆ.
ಶನಿವಾರ ಇಡೀದಿನ ತರಗತಿಗಳನ್ನು ನಡೆಸುವ ಅನಿವಾರ್ಯತೆ ಇದ್ದು, ವಿದ್ಯಾರ್ಥಿಗಳಿಗೆ ಈ ಹಿಂದೆ ಇದ್ದ ದಸರಾ, ಕ್ರಿಸ್ಮಸ್ ರಜೆಗಳಿಗೂ ಕಡಿವಾಣ ಬೀಳುವ ಸಾಧ್ಯತೆ ಇದೆ. ಇನ್ನು ಬ್ಯಾಚ್ ಗಳಾಗಿ ವಿಂಗಡಿಸಿಕೊಂಡು ತರಗತಿಗಳನ್ನು ನಡೆಸಬೇಕಾಗಿದ್ದು, ಈ ಹಿನ್ನೆಲೆ ಅನಿವಾರ್ಯವಾಗಿಯೇ ರಜೆಗಳಿಗೆ ಕತ್ತರಿ ಬೀಳುವ ಸಂಭವ ಹೆಚ್ಚಾಗಿದೆ. ಇನ್ನು ಲಾಕ್ ಡೌನ್ ನಿಂದಾಗಿ ತರಗತಿಗಳಾನ್ನು ಆರಂಭಿಸುವ ವಿಚಾರಕ್ಕೆ ಸಂಬಂಧಿಸಿದಂತೆ ತೊಂದರೆಯನ್ನುಂಟು ಮಾಡಿದ್ದು, ನಿಗದಿತ ಸಮಯದೊಳಗೆ ಪಠ್ಯವನ್ನು ಪೂರ್ಣಗೊಳಿಸುವಂತೆ ಇಲಾಖೆ ಸಂಸ್ಥೆಗಳಿಗೆ ಸೂಚನೆ ನೀಡಿದೆ ಎಂದು ತಿಳಿದು ಬಂದಿದೆ.