ಲಕ್ನೋ, ಮೇ 16 (DaijiworldNews/PY) : ಎರಡು ಟ್ರಕ್ಗಳು ಮುಖಾಮುಖಿ ಡಿಕ್ಕಿಯಾದ ಪರಿಯಾದ ಪರಿಣಾಮ 24 ವಲಸೆ ಕಾರ್ಮಿಕರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಟ್ರಕ್ನಲ್ಲಿ ರಾಜಸ್ಥಾನದಿಂದ ಬಿಹಾರ ಹಾಗೂ ಜಾರ್ಖಂಡ್ಗೆ ವಲಸೆ ಕಾರ್ಮಿಕರು ತೆರಳುತ್ತಿದ್ದರು. ಕೊರೊನಾ ಸೋಂಕು ಹಿನ್ನೆಲೆ ದೇಶಾದ್ಯಂತ ಲಾಕ್ಡೌನ್ ಘೋಷಿಸಿದ ಬೆನ್ನಲ್ಲೇ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಆ ಕಾರಣದಿಂದ ಕಾರ್ಮಿಕರು ತಮ್ಮ ಊರಿಗೆ ವಾಪಾಸ್ಸಾಗುತ್ತಿದ್ದರು.
ಮುಂಜಾನೆ ಸುಮಾರು 3.30 ರ ವೇಳೆಗೆ ಅಪಘಾತ ಸಂಭವಿಸಿದ್ದು, 24 ಜನರು ಮೃತಪಟ್ಟಿದ್ದಾರೆ. 22 ಜನರನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿದೆ. ಗಂಭೀರ ಗಾಯಗೊಂಡ 15 ಜನರನ್ನು ಉತ್ತರ ಪ್ರದೇಶದ ಗ್ರಾಮೀಣ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ಸಾಗಿಸಲಾಗಿದೆ. ರಾಜಸ್ಥಾನದಿಂದ ವಲಸೆ ಕಾರ್ಮಿಕರು ಬಿಹಾರ ಹಾಗೂ ಜಾಖಂಡ್ಗೆ ತೆರಳುತ್ತಿದ್ದರು ಎಂದು ಮುಖ್ಯ ವೈದ್ಯಾಧಿಕಾರಿ ಅರ್ಚನಾ ಶ್ರೀವಾಸ್ತವ ತಿಳಿಸಿದ್ದಾರೆ.