ಬೆಂಗಳೂರು, ಮೇ 16 (Daijiworld News/MSP): ರಾಜ್ಯದಲ್ಲಿ ಶನಿವಾರ ಮತ್ತೆ 23 ಹೊಸ ಕೊರೊನಾ ಪ್ರಕರಣಗಳು ದೃಢವಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1079ಕ್ಕೆ ಏರಿಕೆ ಆಗಿದೆ. ಈ ಪೈಕಿ 548 ಸಕ್ರಿಯ ಸೋಂಕು ಪ್ರಕರಣಗಳಾಗಿದ್ದು, 494 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಇಲ್ಲಿಯ ತನಕ 36 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ನಿನ್ನೆ ಸಂಜೆ 5 ರಿಂದ ಇಂದು ಬೆಳಗ್ಗೆ 11 ಗಂಟೆಗೆ ಬಿಡುಗಡೆಯಾದ ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ, ರಾಜಧಾನಿ ಬೆಂಗಳೂರು ಒಂದರಲ್ಲೇ 14, ಮಂಡ್ಯ 1, ಹಾಸನ 3, ಉಡುಪಿ 1, ಧಾರವಾಡ 1, ದಾವಣಗೆರೆ 1, ಬಳ್ಳಾರಿ 1, ಬಾಗಲಕೋಟೆ 1 ಸೇರಿದಂತೆ 23 ಸೋಂಕಿತರು ಪತ್ತೆಯಾಗಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ರೋಗಿ ಸಂಖ್ಯೆ 653ರ ವ್ಯಕ್ತಿಯ ದ್ವಿತೀಯ ಸಂಪರ್ಕದಿಂದ 14 ಮಂದಿ ಪುರುಷರಿಗೆ ಸೋಂಕು ತಗುಲಿದೆ. 50 ವರ್ಷದ ವ್ಯಕ್ತಿ 17, 18, 19 ವರ್ಷದ ಯುವಕರನ್ನು ಹೊರತುಪಡಿಸಿದರೆ ಎಲ್ಲರೂ 25, 27, 24 ವರ್ಷದ ವಯೋಮಾನದವರು ದ್ವಿತೀಯ ಸಂಪರ್ಕದಿಂದ ರೋಗ ತಗುಲಿದೆ.