ನವದೆಹಲಿ, ಮೇ 16 (DaijiworldNews/PY) : ಲಾಕ್ಡೌನ್ ಪರಿಣಾಮ ಹಿನ್ನೆಲೆ ಸಂಕಷ್ಟಕ್ಕೊಳಗಾಗಿರುವ ದೇಶದ ಆರ್ಥಿಕತೆಗೆ ಚೇತರಿಕೆ ನೀಡುವ ನಿಟ್ಟಿನಲ್ಲಿ ಸರ್ಕಾರ ₹20 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದೆ. ನಿರ್ಮಲಾ ಸೀತಾರಾಮನ್ ಅವರು ಪರಿಹಾರ ಪ್ಯಾಕೇಜ್ನ ನಾಲ್ಕನೇ ಹಂತದ ಉಪಕ್ರಮಗಳನ್ನು ಶನಿವಾರ ಪ್ರಕಟಿಸಿದ್ದಾರೆ.
ನಾಲ್ಕನೇ ಹಂತದ ಪ್ಯಾಕೇಜ್ನಲ್ಲಿ, ವಿಮಾನ ನಿಲ್ದಾಣಗಳು, ಖನಿಜ, ಕಲ್ಲಿದ್ದಲು, ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿದ್ಯುತ್ ವಿತರಣೆ, ರಕ್ಷಣಾ ಇಲಾಖೆ ಹಾಗೂ ಬಾಹ್ಯಾಕಾಶ ಸಂಸ್ಥೆಗಳು ಸೇರಿ ಎಂಟು ವಲಯಗಳಿಗೆ ಉಪಕ್ರಮಗಳನ್ನು ಘೋಷಿಸಿದ್ದಾರೆ.
ವಿಶೇಷ ಆರ್ಥಿಕ ವಲಯ ಕೈಗಾರಿಕಾ ಪಾರ್ಕ್ಗಳು 5 ಲಕ್ಷ ಹೆಕ್ಟೇರ್ಗಳಲ್ಲಿ ವ್ಯಾಪಿಸಿದ್ದು, ಅವುಗಳನ್ನು ಗುರುತಿಸಲು ಸಾಧ್ಯವಾಗುವ ವ್ಯವಸ್ಥೆ ರೂಪಿಸುವ ಮೂಲಕ ಹೂಡಿಕೆದಾರರಿಗೆ ಸಮಸ್ಯೆ ಎದುರಾಗುವುದನ್ನು ತಪ್ಪಿಸಬಹುದಾಗಿದೆ.
ಸೀಮಿತವಾಗಿರುವ ಕಲ್ಲಿದ್ದಲು ಗಣಿಗಾರಿಕೆಯನ್ನು ಸರ್ಕಾರದ ಸಂಸ್ಥೆಗಳಿಗೆ ಮಾತ್ರವೇ ವಾಣಿಜ್ಯೀಕರಿಸಲಾಗುತ್ತದೆ. ಆದಾಯ ಹಂಚಿಕೆ ಆಧಾರದ ಮೇಲೆ ವಾಣಿಜ್ಯೋದ್ದೇಶಿತ ಗಣಿಗಾರಿಕೆಗೆ ಅವಕಾಶ ನೀಡಲಾಗುತ್ತದೆ. ಕಲ್ಲಿದ್ದಲು ನಿಗದಿತ ದಿನಕ್ಕಿಂತ ಮುಂಚಿತವಾಗಿಯೇ ಉತ್ಪಾದನೆಯಾದರೆ ಪ್ರೋತ್ಸಾಹ ನೀಡಲಾಗುತ್ತದೆ. ಭಾರತ ಜಗತ್ತಿನ ಮೂರನೇ ದೊಡ್ಡ ಪ್ರಮಾಣದ ಗಣಿಗಾರಿಕೆಯಾಗದ ಕಲ್ಲಿದ್ದಲು ಸಂಗ್ರಹ ಹೊಂದಿದೆ. ಕೋಲ್ ಬೆಡ್ ಅನ್ನು ಹರಾಜು ಪ್ರಕ್ರಿಯೆಗಳ ಮೂಲಕ ಹೊರ ತೆರೆಯಲಾಗುತ್ತದೆ. ಹೊರ ತೆಗೆಯಲಾಗುವ ಕಲ್ಲಿದ್ದಲನ್ನು ಸ್ಥಳಾಂತರಿಸುವ ಮೂಲಸೌಕರ್ಯಕ್ಕಾಗಿ ₹50,000 ಕೋಟಿ ವೆಚ್ಚ ಮಾಡಲಾಗುತ್ತದೆ ಎಂದಿದ್ದಾರೆ.
ಬಾಕ್ಸೈಟ್ ಕಚ್ಚಾ ವಸ್ತುವಿನ ಅವಶ್ಯಕತೆ ಉಂಟಾದಲ್ಲಿ, ಅವರು ಪ್ರತ್ಯೇಕ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಬಹಳಷ್ಟು ಜನರು ಇಂತಹ ಹೊಂದಾಣಿಕೆಯರದ ನಿಯಮದಿಂದಾಗಿ ದೇಶದಿಂದ ಹೊರ ನಡೆಸಿದ್ದಾರೆ. ಜೊತೆಯಾಗಿಯೇ ಒಂದೇ ಹರಾಜು ಪ್ರಕ್ರಿಯೆಯಲ್ಲಿ ಅಲ್ಯೂಮಿನಿಯಂ ಕೈಗಾರಿಕೆಗೆ ಅಗತ್ಯವಿರುವ ವಸ್ತುಗಳನ್ನು ಪೂರ್ಣಗೊಳಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಅಲ್ಯೂಮಿನಿಯಂನೊಂದಿಗೆ ಬಾಕ್ಸೈಟ್ ಅಥವಾ ಕಲ್ಲಿದ್ದಲನ್ನು ಪಡೆಯಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.