ನವದೆಹಲಿ, ಮೇ 17 (Daijiworld News/MB) : ಕೊರೊನಾ ವೈರಸ್ ಸೋಂಕಿನಿಂದಾಗಿ ಗುಣಮುಖವಾದ ಕುಟುಂಬದ ಮಗುವೊಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಹತ್ಯೆ ಮಾಡುತ್ತೇವೆ ಎಂದು ಹೇಳಿರುವ ವಿವಾದಿತ ವಿಡಿಯೋ ವೈರಲ್ ಆಗಿದ್ದು ಅದನ್ನು ಬಿಜೆಪಿ ನಾಯಕ ಅಮಿತ್ ಮಾಳವಿಯ ಟ್ವೀಟ್ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ಹಮ್ ಮೋದಿ ಕೊ ಮಾರೆಂಗೇ" ಎಂದು ಹೇಳಿರುವುದು ಕೊರೊನಾದಿಂದ ಗುಣಮುಖವಾಗಿ ಮೇ 13 ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ಕುಟುಂಬವೊಂದರ 6 ವರ್ಷದ ಮಗು. ಆದರೆ ಈ ಪುಟ್ಟ ಮಗುವಿನ ಮುಗ್ಧ ಮನಸ್ಸಿನಲ್ಲಿ ವಿಷ ತುಂಬಿದವರು ಯಾರು ಎಂದು ಪ್ರಶ್ನಿಸಿದ್ದಾರೆ.
ಈ ವಿಡಿಯೋ ಬಹಳ ವೈರಲ್ ಆಗಿದ್ದು 1.8 ಸಾವಿರ ಜನರು ಕಾಮೆಂಟ್ ಮಾಡಿದ್ದರೆ 6.4 ಸಾವಿರ ಜನ ವಿಡಿಯೋವನ್ನು ರಿಟ್ವೀಟ್ ಮಾಡಿದ್ದು 14 ಸಾವಿರ ಜನ ಲೈಕ್ ಮಾಡಿದ್ದಾರೆ.