ನವದೆಹಲಿ, ಮೇ 17 (DaijiworldNews/PY) : ಕೇಂದ್ರ ಸರ್ಕಾರದ ಜೊತೆ ಲಾಕ್ಡೌನ್ ಸಂದರ್ಭ ಪ್ರವಾಸಿ ಕಾರ್ಮಿಕರ ಸಂಕಷ್ಟ ಪರಿಹಾರ ಮಾಡುವ ಕಾರ್ಯದಲ್ಲಿ ರಾಜ್ಯ ಸರ್ಕಾರಗಳು ಸಮನ್ವಯ ಸಾಧಿಸುತಿಲ್ಲ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವೇಡ್ಕರ್ ಹೇಳಿದ್ದಾರೆ.
ಕೇಂದ್ರ ಸರ್ಕಾರ ಪ್ರವಾಸಿ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಕಾರ್ಮಿಕರ ನೆರವಿಗೆ ನಮ್ಮ ಸರ್ಕಾರ ನಿಂತಿದೆ. ಆದರೆ, ರಾಜ್ಯ ಸರ್ಕಾರಗಳ ಕಡೆಯಿಂದ ಸೂಕ್ತವಾದ ಉತ್ತರ ಬರುತ್ತಿಲ್ಲ ಎಂದು ತಿಳಿಸಿದ್ದಾರೆ.
ನಾವು 105 ರೈಲುಗಳನ್ನು ಪಶ್ಚಿಮ ಬಂಗಾಳಕ್ಕೆ ಬಿಡಲು ಸಿದ್ಧವಿದ್ದೇವೆ. ಆದರೆ, ಈ ಪ್ರಸ್ತಾಪವನ್ನು ಮಮತಾ ಬ್ಯಾನರ್ಜಿ ಅವರು ತಿರಸ್ಕರಿಸಿದರು. ಜಾರ್ಖಂಡ್, ಛತ್ತೀಸ್ಗಢ, ಮಹಾರಾಷ್ಟ್ರ, ಪಂಜಾಬ್ನಂತಹ ರಾಜ್ಯಗಳು ಕೂಡಾ ಸರಿಯಾಗಿ ಸಮನ್ವಯ ಸಾಧಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಅಧಿಕಾರದಲ್ಲಿಇಲ್ಲ ಎಂದು ದುಃಖವಿದೆ. ಮೋದಿ ಸರ್ಕಾರವನ್ನು ಅದು ನಂಬುವುದಿಲ್ಲ. ಈ ಕಾರಣದಿಂದ ಆರೋಪ ಮಾಡುತ್ತಾರೆ. ರಾಜ್ಯ ಸರ್ಕಾರಗಳ ನೆಲಗಳ ಮೇಲೆ ಪರಿಹಾರ ಕಾರ್ಯಗಳು ಮಾಡಬೇಕಾದ ಕಾರಣದಿಂದ ಹೆಚ್ಚು ಕೇಂದ್ರ ಸರ್ಕಾರದ ಮೇಲ ಅವಲಂಬಿತರಾಗಿರುತ್ತಾರೆ. ಈ ಸಂದರ್ಭ ಸಮನ್ವಯ ಮುಖ್ಯವಾಗಿದೆ ಎಂದು ತಿಳಿಸಿದರು.
ವೈರಸ್ನೊಂದಿಗೆ ಈಗ ಜನರು ಬದುಕಲು ಆರಂಭಿಸಬೇಕು. ಅಲ್ಲದೇ ಜೀವನ ಶೈಲಿಯಲ್ಲೂ ಬಹಳಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಶೀಘ್ರದಲ್ಲೇ ಆರ್ಥಿಕ ಚಟುವಟಿಕೆಗಳು ಆರಂಭವಾಗಲಿ ಎಂದು ನಾನು ಆಶಿಸುತ್ತೇವೆ. ಕೆಲವು ನಿರ್ಬಂಧಗಳು ಕೆಂಪುವಲಯಗಳಲ್ಲಿವೆ. ಆದರೆ, ಹಸಿರು ಹಾಗೂ ಕಿತ್ತಳೆ ವಲಯದಲ್ಲಿ ಚಟುವಟಿಕೆಗಳು ಆರಂಭವಾಗಿವೆ. ಮಹಾತ್ಮ ಗಾಂಧಿಯವರ ವಿಚಾರಗಳಿಗೆ ಆತ್ಮನಿರ್ಭಾರ ಭಾರತ್ ಅನುಗುಣವಾಗಿದೆ. ಆದರೆ, ಸ್ವಾವಲಂಬಿಗಳಾಗುವುದಿಲ್ಲ. ಪ್ರಪಂಚದೊಂದಿಗಿನ ಸಂಬಂಧವನ್ನು ಕಡಿತಗೊಳಿಸುವುದು ಎಂಬ ಅರ್ಥವಲ್ಲ ಎಂದರು.