ಬೆಂಗಳೂರು, ಮೇ 17 (Daijiworld News/MB) : ಶನಿವಾರ ಸಂಜೆ 5 ರಿಂದ ಭಾನುವಾರ ಮಧ್ಯಾಹ್ನದವರೆಗೂ ರಾಜ್ಯದಲ್ಲಿ 54 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು ಒಟ್ಟು ಸೋಂಕಿತರ ಸಂಖ್ಯೆ 1,147 ಕ್ಕೆ ಏರಿಕೆಯಾಗಿದೆ.
ಈ ೫೪ ಕೊರೊನಾ ಪ್ರಕರಣಗಳ ಪೈಕಿ 22 ಪ್ರಕರಣಗಳು ಮಂಡ್ಯದಲ್ಲಿಯೇ ಪತ್ತೆಯಾಗಿದ್ದು ದಕ್ಷಿಣ ಕನ್ನಡ, ಶಿವಮೊಗ್ಗದಲ್ಲಿ ತಲಾ 2, ಕೋಲಾರ, ಯಾದಗಿರಿಯಲ್ಲಿ ತಲಾ 3, ಕಲಬುರಗಿಯಲ್ಲಿ 10, ಹಾಸನದಲ್ಲಿ 6, ಧಾರಾವಾಡದಲ್ಲಿ 4,ಉಡುಪಿ, ವಿಜಯಪುರದಲ್ಲಿ ತಲಾ 1 ಕೊರೊನಾ ಪ್ರಕರಣಗಳು ದೃಢಪಟ್ಟಿದೆ.
ಸೋಂಕು ತಗುಲಿದ ಸುಮಾರು 40 ಜನರು ಮಹಾರಾಷ್ಟ್ರದಿಂದ ಬಂದವರಾಗಿದ್ದು ಈ ಪೈಕಿ ಸುಮಾರು 9 ಮಂದಿ ಮಕ್ಕಳಾಗಿದ್ದಾರೆ.
ರಾಜ್ಯದಲ್ಲಿ ಒಟ್ಟು 497 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ಈವರೆಗೆ 37 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.