ಬೆಂಗಳೂರು, ಮೇ 17 (Daijiworld News/MB) : ಶನಿವಾರ ಸಂಜೆ 5 ಗಂಟೆಯಿಂದ ಭಾನುವಾರ ಸಂಜೆ 5 ಗಂಟೆಯವರೆಗೆ ರಾಜ್ಯದಲ್ಲಿ ಒಟ್ಟು 55 ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು ಈವರೆಗೆ 37 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ
ಶನಿವಾರ ಸಂಜೆ 5 ಗಂಟೆಯಿಂದ ಭಾನುವಾರ ಸಂಜೆ 5 ಗಂಟೆಯವರೆಗೆ ಒಟ್ಟು 54 ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು ಮಧ್ಯಾಹ್ನ 12 ರಿಂದ ಸಂಜೆ 5 ಗಂಟೆಯ ಒಳಗಾಗಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಓರ್ವ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಆಗಿದೆ. P-740 ರ ಸಂಪರ್ಕದಿಂದಾಗಿ ಭಟ್ಕಳದ 68 ವರ್ಷದ ವೃದ್ಧನಿಗೆ ಕೊರೊನಾ ತಗುಲಿದೆ.
ಈ ಒಟ್ಟು 55 ಪ್ರಕರಣಗಳು ಪೈಕಿ 22 ಪ್ರಕರಣಗಳು ಮಂಡ್ಯದಲ್ಲಿಯೇ ಪತ್ತೆಯಾಗಿದ್ದು ದಕ್ಷಿಣ ಕನ್ನಡ, ಶಿವಮೊಗ್ಗದಲ್ಲಿ ತಲಾ 2, ಕೋಲಾರ, ಯಾದಗಿರಿಯಲ್ಲಿ ತಲಾ 3, ಕಲಬುರಗಿಯಲ್ಲಿ 10, ಹಾಸನದಲ್ಲಿ 6, ಧಾರಾವಾಡದಲ್ಲಿ 4,ಉಡುಪಿ, ವಿಜಯಪುರ, ಭಟ್ಕಳದಲ್ಲಿ ತಲಾ 1 ಕೊರೊನಾ ಪ್ರಕರಣಗಳು ದೃಢಪಟ್ಟಿದೆ.
ರಾಜ್ಯದ ಬುಲೆಟಿನ್ ಪ್ರಕಾರವಾಗಿ ಕರ್ನಾಟಕದಲ್ಲಿ 1147 ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು 509 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ 600 ಪ್ರಕರಣಗಳು ಸಕ್ರಿಯವಾಗಿದ್ದು ಈ ಪೈಕಿ 13 ಮಂದಿ ಸೋಂಕಿತರು ಐ.ಸಿ.ಯು.ವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.