ನವದೆಹಲಿ, ಮೇ 17 (DaijiworldNews/SM): ದೇಶವೇ ಲಾಕ್ ಡೌನ್ ಆಗಿ ಸರಿಸುಮಾರು ಎರಡು ತಿಂಗಳಾಗುತ್ತಿದೆ. ಇದರಿಂದಾಗಿ ದೇಶದೆಲ್ಲೆಡೆ ಬಸ್ ಸಂಚಾರ ಸೇರಿದಂತೆ ಬಹುತೇಕ ಎಲ್ಲಾ ಸೇವೆಗಳು ಸಂಪೂರ್ಣ ಬಂದ್ ಆಗಿತ್ತು. ಆದರೆ, ಇದೀಗ ಬಸ್ ಸಂಚಾರಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಹೊಸ ಮಾರ್ಗ ಸೂಚಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಮೇ 19ರವರೆಗೆ ಈಗಿರುವ ಮಾರ್ಗಸೂಚಿಯೇ ಮುಂದುವರೆಯಲಿದೆ.
ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯ ನೂತನ ಮಾರ್ಗ ಸೂಚಿ ಹೊರಡಿಸಿದ್ದು, ಕಂಟೈನ್ ಮೆಂಟ್ ವಲಯ ಹೊರತುಪಡಿಸಿದಂತೆ ಉಳಿದ ಪ್ರದೇಶಗಳಲ್ಲಿ ಸಾರಿಗೆ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಕಂಟೇನ್ಮೆಂಟ್ ಜೋನ್ ಪ್ರದೇಶವನ್ನು ಹೊರತುಪಡಿಸಿದಂತೆ ಉಳಿದೆಡೆ ಅಂತಾರಾಜ್ಯ ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಪ್ರದೇಶಗಳಲ್ಲಿ ಆಟೋ, ಟ್ಯಾಕ್ಸಿಗಳು ಕಾರ್ಯನಿರ್ವಹಿಸಬಹುದಾಗಿದೆ. ವಾಹನಗಳಲ್ಲಿ ಅಂತಾರಾಜ್ಯ ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದೆ. ದೇಶಾದ್ಯಂತ ಅಂತರ್ ಜಿಲ್ಲೆ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಅಂತಾರಾಜ್ಯ ಬಸ್ ಸಂಚಾರ ಅನುಮತಿ ನಿರ್ಧಾರ ರಾಜ್ಯಗಳಿಗೆ ಬಿಟ್ಟ ವಿಚಾರ:
ಅಂತಾರಾಜ್ಯ ಸಂಚಾರಕ್ಕೆ ಅನುಮತಿ ನೀಡಬೇಕೇ ಬೇಡವೇ ಎನ್ನುವುದನ್ನು ಆಯಾ ರಾಜ್ಯ ಸರ್ಕಾರಗಳು ತೀರ್ಮಾನಿಸಬೇಕು ಎಂದು ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ಆದರೆ, ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯ ಅಂತಾರಾಜ್ಯ ಸಂಚಾರಕ್ಕೆ ಯಾವುದೇ ಅಡ್ಡಿ ಇಲ್ಲದಂತೆ ಅವಕಾಶ ಮಾಡಿಕೊಡಲಾಗಿದೆ.
ಕೇಂದ್ರ ಸರಕಾರ ಹೊರಡಿಸಿರುವ ಹೊಸ ಮಾರ್ಗ ಸೂಚಿಯಂತೆ ಕೇಂದ್ರ ಸರಕಾರ ಕೆಲವೊಂದು ವಿಚಾರಗಳಿಗೆ ವಿನಾಯಿತಿ ನೀಡಿದೆ. ಆದರೆ, ಕೆಲವು ವಿಚಾರಗಳಿಗೆ ಲಾಕ್ ಡೌನ್ ಮುಂದುವರೆಸಲಾಗಿದೆ.
ಯಾವುದಕ್ಕೆಲ್ಲಾ ವಿನಾಯಿತಿ:
ಕಂಟೈನ್ಮೆಂಟ್ ಝೋನ್ ಹೊರತು ಪಡಿಸಿ ಉಳಿದ ಕಡೆ ಸಾರಿಗೆ ಸಂಚಾರ
ಕ್ರೀಡಾ ಕಾಂಪ್ಲೆಕ್ಸ್ ಗಳು, ಸ್ಟೇಡಿಯಂಗಳು ತೆರೆಯಬಹುದಾಗಿದೆ
ಆದರೆ, ವೀಕ್ಷಕರಿಗೆ ಪ್ರವೇಶ ನೀಡುವಂತಿಲ್ಲ
ಯಾವುದೆಲ್ಲಾ ಲಾಕ್ ಆಗಿ ಉಳಿಯಲಿದೆ:
ಸಾಮಾಜಿಕ, ಧಾರ್ಮಿಕ, ರಾಜಕೀಯ ಸಮಾರಂಭಗಳಿಲ್ಲ
ದೇಶದೆಲ್ಲೆಡೆ ವಿಮಾನ ಹಾರಾಟ, ಮೆಟ್ರೋ ರೈಲು ಸಂಚಾರ ಬಂದ್
ಶಾಲಾ, ಕಾಲೇಜುಗಳು ಬಂದ್ ಆಗಿರಲಿವೆ
ಹೋಟೆಲ್, ಸಿನಿಮಾ ಹಾಲ್ ಗಳು ಬಂದ್
ಬಾರ್ ಆಂಡ್ ರೆಸ್ಟೋರೆಂಟ್ ಕೂಡ ಬಂದ್ ಆಗಿರುತ್ತದೆ
ಕಂಟೇನ್ಮೆಂಟ್ ಜೋನ್ ಗಳಲ್ಲಿ ಕಠಿಣ ನಿಯಮ
ಶಾಫಿಂಗ್ ಮಾಲ್, ಜಿಮ್, ಈಜುಕೊಳ, ಮನೋರಂಜನಾ ಪಾರ್ಕ್
ದೇಶಿಯ ವೈದ್ಯಕೀಯ ಸೇವೆ, ಏರ್ ಅಂಬ್ಯುಲೆನ್ಸ್
ಕಚೇರಿಗಳು ಮತ್ತು ಉದ್ಯೋಗಸ್ಥರ ಆರೋಗ್ಯ ದೃಷ್ಟಿಯಿಂದ ಮೊಬೈಲ್ ಫೋನ್ ಹೊಂದಿರುವ ಪ್ರತಿಯೊಬ್ಬ ಉದ್ಯೋಗಿಯೂ ಆರೋಗ್ಯ ಸೇತು ಆಪ್ ಹೊಂದಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.