ಬೆಂಗಳೂರು, ಮೇ 18 (Daijiworld News/MSP): ರಾಜ್ಯದಲ್ಲಿ ಇಂದು ಮಹಾಮಾರಿ ಕೊರೊನಾ ಸ್ಪೋಟ ಸಂಭವಿಸಿದೆ. ಭಾನುವಾರ ಸಂಜೆಯ ಬಳಿಕ ಇದುವರೆಗೆ ಒಟ್ಟು 84 ಸೋಂಕು ಪ್ರಕರಣಗಳು ಕಂಡು ಬಂದಿದೆ. ಇದು ರಾಜ್ಯದಲ್ಲಿ ನಿಜಕ್ಕೂ ಆತಂಕ ಸೃಷ್ಟಿಸಿದೆ.
ಆದರೆ ಅನ್ಯ ರಾಜ್ಯಗಳಿಂದ ಬರುತ್ತಿರುವ ಜನರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಕಾಣಿಸಿಕೊಂಡಿದೆ. ರಾಜ್ಯದಲ್ಲಿನ ಕೊರೊನಾ ಸೋಂಕಿತರ ಸಂಖ್ಯೆ ಒಟ್ಟು 1231 ಕ್ಕೆ ಏರಿಕೆಯಾಗಿದೆ.
ಆತಂಕಕಾರಿ ಸಂಗತಿಯೆಂದರೆ ಹಸಿರು ವಲಯದಲ್ಲಿದ್ದ ಕೊಪ್ಪಳ ಹಾಗೂ ರಾಯಚೂರಿಗೂ ಈಗ ಮಾರಣಾಂತಿಕ ಕೊರೊನಾ ವಕ್ಕರಿಸಿಕೊಂಡಿದೆ. ಇಂದು ಬೆಂಗಳೂರು - 18, ರಾಯಚೂರು - 6, ಹಾಸನ - 4, ಕೊಪ್ಪಳ - 3, ಗದಗ - 5, ಬಳ್ಳಾರಿ - 1, ದಾವಣಗೆರೆ - 1, ಮಂಡ್ಯ - 17, ಮೈಸೂರು - 1, ವಿಜಯಪುರ - 5, ಕೊಡಗು - 1, ಬೆಳಗಾವಿ - 2, ಯಾದಗಿರಿ - 5, ಉತ್ತರ ಕನ್ನಡ - 8 ಪ್ರಕರಣಗಳು ಪತ್ತೆಯಾಗಿದೆ.