ಚೆನ್ನೈ, ಮೇ 18 (DaijiworldNews/PY) : ಕುಟುಂಬದಲ್ಲಿ ನಾಲ್ಕನೇ ಬಾರಿಯೂ ಹೆಣ್ಣು ಮಗುವಾಯಿತು ಎಂದು ನಾಲ್ಕು ದಿನದ ಹಸುಗೂಸನ್ನು ಮಗುವಿನ ತಂದೆ ಹಾಗೂ ಅಜ್ಜಿ ಹತ್ಯೆ ಮಾಡಿರುವ ಘಟನೆ ತಮಿಳುನಾಡಿನ ಮಧುರೈನಲ್ಲಿ ನಡೆದಿದೆ.
ಹತ್ಯೆ ಮಾಡಿದ ಆರೋಪಿಗಳನ್ನು ತವಾಮಣಿ (33) ಹಾಗೂ ಆತನ ತಾಯಿ ಪಾಂಡಿಯಮ್ಮಲ್ (57) ಎಂದು ಗುರುತಿಸಲಾಗಿದೆ.
ಮಗುವಿನ ತಾಯಿ ಚಿತ್ರಾ ಮನೆಯಲ್ಲಿದ್ದ ಸಂದರ್ಭ ಮಗುವನ್ನು ಹತ್ಯೆ ಮಾಡಲಾಗಿದೆ. ಸ್ಥಳೀಯರು ಮಗುವಿನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಪೊಲೀಸರಿಗೆ ದೂರು ನೀಡಿದ ಸಂದರ್ಭ ಈ ಘಟನೆ ತಿಳಿದುಬಂದಿದೆ. ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ನಾಲ್ಕನೇ ಬಾರಿಯೂ ಕುಟುಂಬದಲ್ಲಿ ಹೆಣ್ಣು ಮಗುವಾದ ಕಾರಣ ಆರೋಪಿಗಳಾದ ತವಾಮಣಿ ಹಾಗೂ ಆತನ ತಾಯಿ ಪಾಂಡಿಯಮ್ಮಲ್
ಬೇಸರ ವ್ಯಕ್ತಪಡಿಸಿದ್ದರು. ಹಾಗಾಗಿ ಮಗುವಿನ ತಾಯಿ ಮನೆಯಲ್ಲಿಲ್ಲದ ಸಂದರ್ಭ ನಾಲ್ಕು ದಿನದಹಸುಗೂಸಿಗೆ ವಿಷಪ್ರಾಶನ ಮಾಡಿ ಹತ್ಯೆ ಮಾಡಿದ್ದು, ಬಳಿಕ ವೈಗೈ ನದಿಯ ಸಮೀಪ ಸಮಾಧಿ ಮಾಡಿದ್ದಾರೆ.
ಘಟನೆಯ ಬಗ್ಗೆ ಸ್ಥಳೀಯರು ನೀಡಿದ ಆಧಾರದ ಮೇಲೆ ಪೊಲೀಸರು ತನಿಖೆ ಮಾಡಲು ಶನಿವಾರ ಶಿಶುವಿನ ಮೃತದೇಹವನ್ನು ಹೊರಕ್ಕೆ ತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಬಳಿಕ ವರದಿಯಲ್ಲಿ ಮಗುವನ್ನು ಹತ್ಯೆ ಮಾಡಿರುವ ವಿಷಯ ಖಚಿತವಾಗಿದೆ. ಭಾನುವಾರ ಪೊಲೀಸರು ಹತ್ಯೆ ಆರೋಪದ ಮೇಲೆ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ವಿಚಾರಣೆಯ ಸಂದರ್ಭ ಆರೋಪಿಗಳು, ಮಗು ನಿದ್ರೆಯಲ್ಲಿ ಸಾವನ್ನಪ್ಪಿತ್ತು. ಕೂಡಲೇ ನಾವು ಮಗುವನ್ನು ಆಸ್ಪತ್ರೆಗೆ ಕೆರದುಕೊಂಡು ಹೋಗಲು ಆಂಬುಲೆನ್ಸ್ಗೂ ಕರೆ ಮಾಡಿದ್ದೆವು ಎಂದು ಸುಳ್ಳು ಹೇಳಿದ್ದಾರೆ. ಮಗುವಿನ ಮರಣೋತ್ತರ ವರದಿ ನೋಡಿದ ನಂತರ ಇಬ್ಬರನ್ನು ಪುನಃ ತೀವ್ರ ವಿಚಾರಣೆ ಮಾಡಲಾಗಿದೆ. ಆಗ ಇಬ್ಬರು ಆರೋಪಿಗಳು ಮಗುವನ್ನು ನಾವೇ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ವನಿತಾ ತಿಳಿಸಿದರು.
ಮೊದಲು ಮಗುವಿನ ತಂದೆ ಹಾಗೂ ಅಜ್ಜಿ ಮಗುವಿಗೆ ಗಿಡಮೂಲಿಕೆಯ ರಸವನ್ನು ಕುಡಿಸಿದ್ದರು. ವಿಷ ಕುಡುಸಿದರೂ ಮಗು ಬದುಕಿದ್ದನು ಗಮನಿಸಿ ಉಸಿರುಗಟ್ಟುಸಿ ಕೊಂದಿದ್ದಾರೆ. ಮಗುವಿನ ತಾಯಿ ಈ ಪ್ರಕರಣದಲ್ಲಿ ಪಾಲ್ಗೊಂಡಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಸದ್ಯಕ್ಕೆ ಪೊಲೀಸರು ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದು, ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಲಾಗಿದೆ.