ನವದೆಹಲಿ, ಮೇ 18 (Daijiworld News/MB) : ದೇಶದಾದ್ಯಂತ ಕೊರೊನಾ ನಿಯಂತ್ರಣಕ್ಕಾಗಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು. ಈ ಸಂದರ್ಭದಲ್ಲೇ ಆತ್ಮ ನಿರ್ಭರ್ ಭಾರತ ಪರಿಕಲ್ಪನೆಯಿಂದ ಸ್ಪೂರ್ತಿಗೊಂಡ 'ಜಯತು ಜಯತು ಭಾರತಂ - ವಸುದೇವ್ ಕುಟುಂಬಕಂ' ಎಂಬ ಹಾಡನ್ನು 200ಕ್ಕೂ ಹೆಚ್ಚು ಗಾಯಕರು ಹಾಡಿದ್ದು ಇದನ್ನು ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟರ್ನಲ್ಲಿ ಶೇರ್ ಮಾಡಿದ್ದಾರೆ.
ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ಟ್ವೀಟ್ನ್ನು ಶೇರ್ ಮಾಡಿರುವ ಅವರು, ಈ ಹಾಡು ಎಲ್ಲರನ್ನೂ ರೋಮಾಂಚನಗೊಳಿಸುತ್ತದೆ ಹಾಗೂ ಪ್ರೇರೆಪಣೆ ನೀಡುತ್ತದೆ. ಆತ್ಮ ನಿರ್ಭರ್ ಭಾರತಕ್ಕೆ ಇದರಲ್ಲಿ ಸಂದೇಶವಿದೆ ಎಂದು ಹೇಳಿದ್ದಾರೆ.
ಇದನ್ನು ಟ್ವೀಟ್ ಮಾಡಿರುವ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರು, ನಮಸ್ಕಾರ, ಇದು ಭಾರತೀಯ ಗಾಯಕರ ಹಕ್ಕುಗಳ ಸಂಘ (ಇಸ್ರಾ)ದ 211 ಸದಸ್ಯರು ಒಂದಾಗಿ ಸೇರಿ ಆತ್ಮ ನಿರ್ಭರ ಭಾರತದ ಭಾವನೆಯಿಂದ ಪ್ರೇರೇಪಿತರಾಗಿ ಈ ಗೀತೆಯನ್ನು ನಿರ್ಮಾಣ ಮಾಡಿದ್ದು ಇದನ್ನು ಭಾರತದ ಜನತೆಗೆ ಹಾಗೂ ಆಧರಣೀಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ನಾವು ಅರ್ಪಣೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಈ ಹಾಡಲ್ಲಿ ಗಾಯಕರಾದ ಆಶಾ ಭೋನ್ಸ್ಲೆ, ಸೋನು ನಿಗಮ್, ಶಂಕರ್ ಮಹದೇವನ್, ಶಾನ್, ಉಷಾ ಉತುಪ್, ಪ್ರಸೂನ್ ಜೋಶಿ, ವಸುಂದರ ದಾಸ್, ಚಿತ್ರಾ, ಎಸ್ಪಿ ಬಾಲಸುಬ್ರಹ್ಮಣ್ಯಂ, ಸೋನು ನಿಗಂ, ಲತಾ ಮಂಗೇಶ್ವರ್ ಸೇರಿದಂತೆ ಕನ್ನಡದ ಗಾಯಕರಾದ ವಿಜಯ್ ಪ್ರಕಾಶ್, ಬಿ ಆರ್ ಛಾಯಾ, ಸಂಗೀತಾ ಕಟ್ಟಿ, ಶಮಿತಾ ಮಲ್ನಾಡ್ ಸೇರಿ ಇತರರು ಗೀತೆಯನ್ನು ಹಾಡಿದ್ದಾರೆ.