ದಾವಣಗೆರೆ, ಮೇ 18 (DaijiworldNews/PY) : ಕೊರೊನಾ ಸೋಂಕು ವ್ಯಾಪಿಸುವ ಭೀತಿ ಹಿನ್ನೆಲೆ ಎಲ್ಲರೂ ಮಾಸ್ಕ್ ಧರಿಸಿ, ಇಲ್ಲದಿದ್ದರೆ ದಂಡ ಬೀಳುತ್ತದೆ. ಎಲ್ಲಿ ಯಾವಾಗ ಕೊರೊನಾ ಬರುತ್ತೋ ಗೊತ್ತಿಲ್ಲ. ಯಾರನ್ನೂ ನಂಬಲು ಆಗವುದಿಲ್ಲ. ನನಗೂ ಇದ್ದರೂ ಇರಬಹುದು.
ಮುಂಜಾಗ್ರತ ಕ್ರಮವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಎಚ್ಚರವಾಗಿರಿ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹೇಳಿದ್ದಾರೆ.
ಹೊನ್ನಾಳಿ ತಾಲೂಕಿನ ಗೋವಿನಕೋವಿ ಗ್ರಾಮದಲ್ಲಿ ನಡೆಯುತ್ತಿದ್ದ ಸರಳ ವಿವಾಹದ ಕಾರ್ಯಕ್ರಮಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಕೊರೊನಾ ಸೋಂಕು ಭೀತಿ ವ್ಯಾಪಿಸುವ ಆತಂಕದ ನಿಟ್ಟಿನಲ್ಲಿ ಎಲ್ಲರೂ ಮಾಸ್ಕ್ ಧರಿಸಿ, ಇಲ್ಲದಿದ್ದರೆ ದಂಡ ಹಾಕುತ್ತಾರೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ವ್ಯಕ್ತಿ, ನಾನು ಕೊರೊನಾ ಬಂದ ಬಳಿಕ ಎಲ್ಲಿಗೂ ಹೋಗಿಲ್ಲ ಎಂದಿದ್ದಾನೆ. ಕೊರೊನಾ ಬಗ್ಗೆ ಮುಂಜಾಗ್ರತೆ ವಹಿಸಿ ಎಂದು ರೇಣುಕಾಚಾರ್ಯ ಮನವಿ ಮಾಡಿದ್ದಾರೆ. ಅಲ್ಲದೇ, ಸರಳ ವಿವಾಹವಾಗುತ್ತಿದ್ದ ಜೋಡಿಗೆ ರೇಣುಕಾಚಾರ್ಯ ಮಾಸ್ಕ್ ವಿತರಣೆ ಮಾಡಿದರು.
ಇದೇ ಸಂದರ್ಭ ರೇಣುಕಾಚಾರ್ಯ ಅವರ ಕ್ಷೇತ್ರದ ವ್ಯಕ್ತಿಯೋರ್ವ ಮಾತನಾಡಿದ್ದು, ನೀವು ಕೇವಲ ಫೇಸ್ಬುಕ್ ಲೈವ್ನಲ್ಲಿ ಮಾತ್ರ ಇರುತ್ತೀರಾ. ನಮ್ಮ ಊರಿಗೆ ಬಂದೇ ಇಲ್ಲ ಎಂದು ಪ್ರಶ್ನಿಸಿದ್ದಾನೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಏಯ್, ನಾನು ನಿಮ್ಮ ಊರಿಗೆ ಬಂದಿದ್ದೇನೆ. ಅಲ್ಲದೇ, ಮನೆ ಮನೆಗೆ ಬಂದು ಕೊಡೊನಾ ಬಗ್ಗೆ ಜಾಗೃತಿ ಮೂಡಿಸಿದ್ದೇನೆ ಎಂದು ತಿಳಿಸಿದ್ದಾರೆ.