ಉತ್ತರಪ್ರದೇಶ, ಮೇ 19 (Daijiworld News/MB) : ಝಾನ್ಸಿ-ಮಿರ್ಜಾಪುರ್ ಹೆದ್ದಾರಿಯಲ್ಲಿ ಟ್ರಕ್ನ ಟೈರ್ ಸ್ಪೋಟವಾದ ಪರಿಣಾಮ ಮೂರು ಜನ ಮಹಿಳಾ ವಲಸೆ ಕಾರ್ಮಿಕರು ಮೃತಪಟ್ಟು, 12 ಜನ ಗಂಭೀರ ಗಾಯಗೊಂಡಿದ್ದಾರೆ.
ಈ ಕುರಿತಾಗಿ ಮಾಹಿತಿ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಕೊರೊನಾ ಲಾಕ್ಡೌನ್ನಿಂದಾಗಿ ಸಂಕಷ್ಟದಲ್ಲಿರುವ ಹಲವು ಕಾರ್ಮಿಕರು ತಮ್ಮ ಊರುಗಳಿಗೆ ಕಾಲ್ನಡಿಗೆಯಲ್ಲಿಯೆ ಹೊರಟಿದ್ದು ಕಳೆದ ರಾತ್ರಿ ದೆಹಲಿಯಿಂದ ಉತ್ತರಪ್ರದೇಶದಲ್ಲಿರುವ ತಮ್ಮ ಗ್ರಾಮಗಳಿಗೆ 17 ಜನ ವಲಸೆ ಕಾರ್ಮಿಕರ ತಂಡ ಕಾಲ್ನಡಿಗೆಯ ಮೂಲಕ ಪ್ರಯಾಣ ಆರಂಭಿಸಿದ್ದರು. ಏತನ್ಮಧ್ಯೆ ಹೆದ್ದಾರಿಯಲ್ಲಿ ಬಂದ ಟ್ರಕ್ ಚಾಲಕನಲ್ಲಿ ಗ್ರಾಮಗಳಿಗೆ ಬಿಡುವಂತೆ ಮನವಿ ಮಾಡಿದ್ದು ಆತ ಈ 17 ಜನರನ್ನೂ ಕರೆದೊಯ್ದಿದ್ದು ದಾರಿ ಮಧ್ಯದಲ್ಲಿ ಟ್ರಕ್ ಟೈರ್ ಸ್ಪೋಟ ಗೊಂಡು ಮಗುಚಿಬಿದ್ದಿದೆ.
ಲಾಕ್ಡೌನ್ ಬಳಿಕ ಹಲವು ಕಾರ್ಮಿಕರು ಕಾಲ್ನಡಿಗೆಯಿಂದಲ್ಲೆ ತಮ್ಮ ಊರುಗಳಿಗೆ ಹೊರಟಿದ್ದು ಸಾಕಷ್ಟು ತೊಂದರೆಗೆ ಒಳಗಾಗಿದ್ದಾರೆ. ವಲಸೆ ಕಾರ್ಮಿಕರು ಸಾವನ್ನಪ್ಪುತ್ತಿರುವ ಬಗ್ಗೆ ಈ ಹಿಂದೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿತ್ತು.
ಶನಿವಾರ ಟ್ರಕ್ಗಳು ಮುಖಾಮುಖಿ ಢಿಕ್ಕಿಯಾಗಿದ್ದು ಈ ಅಪಘಾತದಿಂದಾಗಿ 26 ಜನ ವಲಸೆ ಕಾರ್ಮಿಕರು ಸಾವನ್ನಪ್ಪಿದ್ದು ಕಳೆದ 10 ದಿನಗಳಲ್ಲಿ ಸುಮಾರು 50ಕ್ಕಿಂತ ಹೆಚ್ಚು ಜನರು ವಲಸೆ ಕಾರ್ಮಿಕರು, ಅಪಘಾತದಿಂದಾಗಿ ಅಸುನೀಗಿದ್ದಾರೆ.