ಶಿವಮೊಗ್ಗ, ಮೇ 19 (Daijiworld News/MB) : ತನ್ನ ತಾಯಿ ಸಾವನ್ನಪ್ಪಿ ಐದು ದಿನವಾಗಿದ್ದರೂ ಆತಂಕಗೊಂಡ ಮಗಳು ತಾಯಿಯ ಶವದೊಂದಿಗೆಯೇ 5 ದಿನ ಕಳೆದಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಬಸವನಗುಡಿಯ ನಿವಾಸಿ ನಿವೃತ್ತ ಶಿಕ್ಷಕಿಯಾಗಿದ್ದ ಮೃತ ರಾಜೇಶ್ವರಿ ಕ್ಯಾನ್ಸರ್ನಿಂದ ಬಳಲುತ್ತಿದ್ದು ಅತಿಯಾಗಿ ಔಷಧಿ ಸೇವಿಸಿದ ಪರಿಣಾಮ ಸಾವನ್ನಪ್ಪಿರಬಹುದು ಎಂದು ಶಂಖಿಸಲಾಗಿದೆ.
ಇನ್ನು ಮಗಳು ಶಾಂಭವಿ ಮಾನಸಿಕ ಅಸ್ವಸ್ಥೆಯಾಗಿದ್ದು ತಾಯಿ ಮೃತಪಟ್ಟಾಗ ಏನು ತೋಚದೆ ಶವದೊಂದಿಗೆ ಕಳೆದಿದ್ದು 5 ದಿನವಾದಾಗ ಶವ ಕೊಳೆತ ವಾಸನೆ ಬಂದಿದ್ದರಿಂದ ಅಕ್ಕಪಕ್ಕದ ಮನೆಯವರು ಬಂದು ನೋಡಿ ಜಯನಗರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಶವವನ್ನು ಶಿವಮೊಗ್ಗದ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.