ನವದೆಹಲಿ, 20 (Daijiworld News/MSP): ರೈಲ್ವೆ ಇಲಾಖೆ ಜೂನ್ 1ರಿಂದ ಹವಾನಿಯಂತ್ರಿತ ರಹಿತ ರೈಲು ಸೇವೆ ಆರಂಭಿಸಲಿದೆ. ರೈಲ್ವೆ ಇಲಾಖೆ ಬುಧವಾರ ಈ ನಿರ್ಧಾರ ಪ್ರಕಟಿಸಿದ್ದು, ಶೀಘ್ರದಲ್ಲೇ ಬುಕ್ಕಿಂಗ್ ಆರಂಭಿಸಲಿದೆ.
ಲಾಕ್ ಡೌನ್ 4.0 ಜಾರಿಯಲ್ಲಿರುವಾಗಲೇ ಶ್ರಮಿಕ್ ರೈಲು ಮತ್ತು ವಿಶೇಷ ರೈಲುಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು. ಆದರೆ, ಪ್ರಯಾಣಿಕರ ರೈಲು ಸಂಚಾರ ಪೂರ್ಣಪ್ರಮಾಣದಲ್ಲಿ ಸಂಚಾರ ಆರಂಭಕ್ಕೆ ಅವಕಾಶ ನೀಡಿರಲಿಲ್ಲ. ಜೂನ್ 30 ರವರೆಗೆ ಪ್ರಯಾಣಿಕರ ರೈಲು ಸಂಚಾರ ಇರುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿತ್ತು. ಆದರೆ, ಜೂನ್ 1 ರಿಂದ ಸುಮಾರು 200ಕ್ಕೂ ಅಧಿಕ ರೈಲು ಸಂಚಾರ ಆರಂಭವಾಗಲಿದೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯೆಲ್ ಹೇಳಿದ್ದಾರೆ.
ಜೂನ್ 1ರಿಂದ ಶ್ರಮಿಕ್ ವಿಶೇಷ ರೈಲುಗಳ ಜೊತೆ ಹೆಚ್ಚುವರಿಯಾಗಿ 200 ರೈಲು ಸಂಚರಿಸಲಿವೆ. ಶೀಘ್ರದಲ್ಲೇ ಬುಕ್ಕಿಂಗ್ ಇಲಾಖೆ ಟ್ವೀಟ್ ನಲ್ಲಿ ತಿಳಿಸಿದೆ.