ಜಮ್ಮು-ಕಾಶ್ಮೀರ, ಮೇ 20 (DaijiworldNews/PY) : ಭಾರತದೊಳಕ್ಕೆ ಅಕ್ರಮವಾಗಿ ಪ್ರವೇಶ ಮಾಡಲು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಬಳಿ ಸುಮಾರು 300ಕ್ಕೂ ಹೆಚ್ಚು ಉಗ್ರರು ಸಜ್ಜಾಗಿದ್ದಾರೆ ಎಂದು ಜಮ್ಮು-ಕಾಶ್ಮೀರ ಪೊಲೀಸ್ ಮಹಾ ನಿರ್ದೇಶಕ ದಿಲ್ಬಾಗ್ ಸಿಂಗ್ ಹೇಳಿದ್ದಾರೆ.
ಈಗಾಗಲೇ ರಾಜೌರಿ ಪೂಂಚ್ ಪ್ರದೇಶದಲ್ಲಿ ಉಗ್ರರು ನುಸುಳುವ ನಾಲ್ಕು ಘಟನೆಗಳು ನಡೆದಿದ್ದು, ಅದನ್ನು ತಡೆಯಲಾಗಿದೆ. ಉಗ್ರರನ್ನು ಜಮ್ಮು-ಕಾಶ್ಮೀರದೊಳಕ್ಕೆ ಕಳುಹಿಸುವ ಪಾಕಿಸ್ತಾನದ ಯೋಜನೆಯನ್ನು ವಿಷಲಗೊಳಿಸು ಸಲುವಾಗಿ ಕಣ್ಗಾವಲು ಹಾಗೂ ಬಿಗಿಭದ್ರತೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಕೇಂದ್ರ ಕಚೇರಿಯಲ್ಲಿ ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಪಾಕ್ ಆಕ್ರಮಿತ ಪ್ರದೇಶದಲ್ಲಿ ಅಂದಾಜು 150 ಮಂದಿ ಉಗ್ರರು, 200 ಉಗ್ರರು ಜಮ್ಮು ಪ್ರದೇಶದಲ್ಲಿ ತಾತ್ಕಾಲಿಕ ಶಿಬಿರದಲ್ಲಿ ಠಿಕಾಣಿ ಹೂಡಿದ್ದಾರೆ. ಪಾಕಿಸ್ತಾನದ ಸೇನೆ, ಐಎಸ್ ಐ ಹಾಗೂ ಇತರೆ ಏಜೆನ್ಸಿಗಳು ತುಂಬಾ ಸಕ್ರಿಯವಾಗಿದ್ದು, ಉಗ್ರರಿಗೆ ಗಡಿ ನಿಯಂತ್ರಣ ಪ್ರದೇಶದಲ್ಲಿ ತರಬೇತಿ ನೀಡುವ ಕಾರ್ಯದಲ್ಲಿ ತೊಡಗಿಕೊಂಡಿವೆ ಎಂದಿದ್ದಾರೆ.