ನವದೆಹಲಿ, ಮೇ 20 (DaijiworldNews/PY) : ವಿಮಾನ ಸಂಸ್ಥೆಗಳು, ನಾಗರಿಕ ವಿಮಾನಯಾನ ಸಚಿವಾಲಯ ಸಂಚಾರ ಆರಂಭ ಮಾಡಲು ಸಜ್ಜಾಗಿಯೇ ಇವೆ. ಆದರೆ, ವಿಮಾನ ಸಂಚಾರ ಆರಂಭ ಮಾಡಲು ರಾಜ್ಯ ಸರ್ಕಾರಗಳ ಅನುಮತಿಗಾಗಿ ಕಾಯುತ್ತಿದ್ದೇವೆ ಎಂದು ಸಚಿವ ಹರ್ದೀಪ್ ಸಿಂಗ್ಪುರಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
ನಾವು ಸಹಕಾರ ಒಕ್ಕೂಟದ ತತ್ವದ ಆಧಾರದಲ್ಲಿ ಕಾರ್ಯನಿರ್ವಹಿಸುವುದರಿಂದ ರಾಜ್ಯ ಸರ್ಕಾರಗಳ ಸಹಕಾರ ಮುಖ್ಯ ಎಂದರು.
ಮುಂದಿನ ತಿಂಗಳು ದೇಶದ ಪ್ರಮುಖ ವಿಮಾನಯಾನ ಸಂಸ್ಥೆಗಳು ದೇಶೀಯ ವಿಮಾನ ಪ್ರಯಾಣದ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯನ್ನು ಪ್ರಾರಂಭ ಮಾಡಲಿವೆ ಎಂದು ಮೂಲಗಳಿ ತಿಳಿಸಿವೆ.
ಅಂತರಾಷ್ಟ್ರೀಯ ಹಾಗೂ ದೇಶೀಯ ವಿಮಾನಯಾನವನ್ನು ಕೊರೊನಾ ವೈರಸ್ ಹಿನ್ನೆಲೆ ನಿರ್ಬಂಧ ಮಾಡಲಾಗಿದ್ದು, ದೇಶೀಯ ವಿಮಾನ ಸಂಚಾರಕ್ಕೆ ಜೂನ್ 1ರಿಂದ ಅನಮತಿ ದೊರಕಲಿದೆ ಎನ್ನುವ ನಿರೀಕ್ಷೆ ಹೊಂದಿವೆ.