ನವದೆಹಲಿ, ಮೇ 20 (DaijiworldNews/PY) : ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು, ಲಾಕ್ಡೌನ್ನಿಂದ ಸಂಕಷ್ಟಕ್ಕೊಳಗಾದ ವಲಸಿಗರು ಕಾರ್ಮಿಕ ಕಾನೂನಿನ ತಿದ್ದುಪಡಿ ಹಾಗೂ ಇತರೆ ವಿಚಾರಗಳ ಬಗ್ಗೆ ಚರ್ಚೆ ನಡೆಸಲು ಮೇ 22ರಂದು ವಿರೋಧ ಪಕ್ಷಗಳ ಸಭೆ ಕರೆದಿದ್ದಾರೆ.
ಸಭೆಯು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಲಿದ್ದು, 17 ಪಕ್ಷಗಳು ಸಮ್ಮತಿ ಸೂಚಿಸಿವೆ. ಸಭೆಗೆ ಸ್ಟಾಲಿನ್, ಮಮತಾ ಬ್ಯಾನರ್ಜಿ, ಶರದ್ ಪವಾರ್ ಹಾಗೂ ಹಲವು ವಿಪಕ್ಷಗಳ ಮುಖಂಡರು ಭಾಗವಹಿಸುವ ಸಾಧ್ಯತೆ ಇದೆ.
ಸಭೆಯಲ್ಲಿ, ನಿರುದ್ಯೋಗ ಸಮಸ್ಯೆ, ಲಾಕ್ಡೌನ್ ನಿರ್ವಹಣೆ ಮಾಡುವಲ್ಲಿ ಕೇಂದ್ರದ ವೈಫಲ್ಯದ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಕೇಂದ್ರವು ಪರಷ್ಕರಿಸುತ್ತಿರುವ ಕಾರ್ಮಿಕ ನೀತಿಯಿಂದ, ಬಿಜೆಪಿ ಅಧಿಕಾರವಿರುವ ರಾಜ್ಯದಲ್ಲಿ ವಿದೇಶಿ ಬಂಡವಾಳ ಹೂಡಿಕೆಯಾಗುವ ಸಾಧ್ಯತೆ ಇದೆ ಎನ್ನುವುದು ಕಾಂಗ್ರೆಸ್ನ ಆರೋಪವಾಗಿದ್ದು, ಆದ ಕಾರಣ ಈ ಸಭೆಯಲ್ಲಿ ಕಾರ್ಮಿಕ ಕಾನೂನಿನ ಬಗ್ಗೆ ಚರ್ಚೆಯಾಗಲಿವೆ.