ಚೆನ್ನೈ, ಮೇ 20 (Daijiworld News/MSP): ಅತೀ ಜನಪ್ರಿಯವಾಗಿರುವ ಪಬ್ಜಿ ಗೇಮ್ ಯುವಸಮೂಹವನ್ನು ಆವರಿಸಿಕೊಂಡಿದ್ದು, ಯುವಕರು ಹೆಚ್ಚಾದ ಸಮಯವನ್ನು ಪಬ್ಜಿ ಗೇಮ್ ಆಡುವುದರಲ್ಲಿಯೇ ಕಳೆಯುತ್ತಿದ್ದಾರೆ. ಡೆಡ್ಲಿ ಗೇಮ್ನಿಂದ ಯುವ ಸಮೂಹ ಹೆಚ್ಚಾಗಿ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದೆ. ಈ ಆಟದಿಂದ ಸಾಕಷ್ಟು ಜನರ ಜೀವನ ಹಾಳಾಗುತ್ತಿದೆ.ಇದೀಗ ಈ ಡೆಡ್ಲಿ ಗೇಮ್ ಪಬ್ಜಿ ಗೆ ಚೆನ್ನೈನಲ್ಲಿ 16 ವರ್ಷದ ಹುಡುಗ ಸಾವನಪ್ಪಿದ್ದಾನೆ.
ತಮಿಳುನಾಡಿನ ಈರೋಡ್ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು ನಿರಂತರವಾಗಿ ಆರು ಗಂಟೆಗಳ ಕಾಲ ಆಟ ಆಡುತ್ತಿದ್ದ ಹದಿಹರೆಯ ಬಾಲಕ ಹೃದಯ ಸ್ತಂಭನಕ್ಕೊಳಗಾಗಿ ಸಾವನ್ನಪ್ಪಿದ್ದಾನೆ. ಮೃತ ಬಾಲಕನನ್ನು ಸತೀಶ್ ಕುಮಾರ್ ಎಂದು ಗುರುತಿಸಲಾಗಿದೆ.
ಪ್ರಥಮ ಪಿಯುಸಿಯಲ್ಲಿ ಓದುತ್ತಿದ್ದ ಸತೀಸ್ ಪಬ್ಜಿ ಆಟದ ವ್ಯಸನಿಯಾಗಿದ್ದು, ಪ್ರತಿದಿನಂದಂತೆ ಊಟ ಮುಗಿಸಿ ಆರು ಗಂಟೆಗಳ ಕಾಲ ಬಾಲಕ ಮೊಬೈಲ್ ಹಿಡಿದು ಡೆಡ್ಲಿ ಗೇಮ್ ಆಡಲು ಪ್ರಾರಂಭಿಸಿದ್ದು, ಆಟ ಆಡುತ್ತಲೇ ಕೆಳಗೆ ಕುಸಿದು ಬಿದ್ದಿದ್ದಾನೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಬಾಲಕ ಜೀವ ಉಳಿಸಿಲು ಸಾಧ್ಯವಾಗಿಲ್ಲ. ಬಾಲಕ ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾನೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.