ನವದೆಹಲಿ, ಮೇ 20 (DaijiworldNews/PY) : ಭಾರತದ ನೆಲದಲ್ಲಿ ಭಯೋತ್ಪಾದಕ ದಾಳಿ ನಡೆದ ಸಮಯದಲ್ಲೆಲ್ಲಾ ನಾವು ಪಾಕಿಸ್ತಾನಕ್ಕೆ ಚಿಂತೆಗೊಳಗಾಗುವಂತೆ ಮಾಡಿದ್ದೇವೆ ಹಾಗೂ ಮುಂದೆ ಬರುವ ದಿನಗಳಲ್ಲೂ ಈ ಚಿಂತೆ ಪಾಕಿಸ್ತಾನಕ್ಕೆ ಇರಬೇಕು ಎಂದು ವಾಯುಪಡೆಯ ಮುಖ್ಯಸ್ಥ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಹೇಳಿದ್ದಾರೆ.
ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಐಎಎಫ್, ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಗಡಿ ನಿಯಂತ್ರಣ ರೇಖೆ ಬಳಿ ಕಂಡುಬರುವ ಉಗ್ರಗಾಮಿಗಳ ಶಿಬಿರ ಅಥವಾ ಯಾವುದೇ ಲಾಂಚ್ಪ್ಯಾಡ್ಗಳನ್ನು ನಾಶಪಡಿಸಲು ಸಿದ್ದವಾಗಿದೆ ಎಂದು ತಿಳಿಸಿದರು.
ಭಾರತದ ನೆಲದಲ್ಲಿ ಭಯೋತ್ಪಾದಕ ದಾಳಿ ನಡೆದ ಸಮಯದಲ್ಲೆಲ್ಲಾ ನಾವು ಪಾಕಿಸ್ತಾನಕ್ಕೆ ಚಿಂತೆಗೊಳಗಾಗುವಂತೆ ಮಾಡಿದ್ದೇವೆ ಹಾಗೂ ಮುಂದೆ ಬರುವ ದಿನಗಳಲ್ಲೂ ಈ ಚಿಂತೆ ಪಾಕಿಸ್ತಾನಕ್ಕೆ ಇರಬೇಕು. ಈ ರೀತಿಯಾದ ಚಿಂತನೆ ಭವಿಷ್ಯದಲ್ಲಿ ಕಡಿಮೆ ಆಗಬೇಕಾದರೆ ಭಯೋತ್ಪಾದನೆಗೆ ಕಾಶ್ಮೀರ ಕುಮ್ಮಕ್ಕು ನೀಡುವುದನ್ನು ಬಿಡಬೇಕು ಎಂದರು.
ನಮ್ಮ ವಾಯುಪಡೆಯು ಸರ್ಕಾರದ ನಿದೇಶನಗಳಿಗೆ ಅನುಸಾರವಾಗಿ ಯಾವುದೇ ಸಂದರ್ಭದಲ್ಲೂ ಕಾರ್ಯಚರಿಸಲು ಸಿದ್ದವಾಗಿದೆ. ದೇಶಕ್ಕಾಗಿ ಸೇವೆ ಮಾಡಲು ವಾಯುಪಡೆಯು 24×7 ಲಭ್ಯವಿರುತ್ತದೆ. ಈ ವಿಚಾರವಾಗಿ ಯಾರಿಗೂ ಅನುಮಾನ ಬೇಡ ಎಂದು ತಿಳಿಸಿದರು.
ನಾವು ಭಾರತೀಯ ವಾಯುಪಡೆ ನಡೆಸಿದ ಬಾಲಾಕೋಟ್ ವಾಯು ದಾಳಿಯ ಮೂಲಕ ಪಾಕಿಸ್ತಾನಕ್ಕೆ ತಕ್ಕನಾದ ಸಂದೇಶವನ್ನು ರವಾನೆ ಮಾಡಿದ್ದೇವೆ. ಅಲ್ಲದೇ, ಉಗ್ರ ಪೋಷಣೆಗೆ ಉಪಯೋಗ ಮಾಡಿಕೊಂಡಲ್ಲಿ ಇದೇ ರೀತಿಯಾದ ಪರಿಣಾಮಗಳನ್ನು ಎದುರಿಸಬೇಕಗುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇತ್ತೀಚೆಗೆ ತಿಳಿಸಿದ್ದರು.