ಬೆಂಗಳೂರು, ಮೇ 20 (Daijiworld News/MB) : ಲಾಕ್ಡೌನ್ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕೈಗೊಂಡಿದ್ದ ಹಲವು ತೀರ್ಮಾನಗಳನ್ನು ವಿರೋಧಿಸಿ ರಾಜ್ಯ ಕಾಂಗ್ರೆಸ್ ನಾಯಕರು ವಿಧಾನಸೌಧ ಹಾಗೂ ವಿಕಾಸಸೌಧ ನಡುವಿನ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ಸಂದರ್ಭದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಕಿದ ಅವಾಜ್ ನೋಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಶಾಕ್ ಆಗಿದ್ದಾರೆ.
ವಿಧಾನಸೌಧ ಪೊಲೀಸರು ಭದ್ರತಾ ದೃಷ್ಟಿಯಿಂದ ಯಾವುದೇ ಪ್ರತಿಭಟನೆಯನ್ನು ನಡೆಸಲು ಅನುಮತಿಯಿಲ್ಲ ಎಂದು ಸೂಚನಾ ಪತ್ರ ಅಂಟಿಸಿದ್ದು ಇದನ್ನು ನೋಡಿ ಗರಮ್ ಆದ ಸಿದ್ಧರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇನ್ನು ಪ್ರತಿಭಟನೆಯನ್ನು ಭಾಷಣ ಮಾಡಿದ ಬಳಿಕ ಸಿದ್ಧರಾಮಯ್ಯ ಅವರು ಕೇಂದ್ರ ಸರ್ಕಾರದ 20 ಲಕ್ಷ ಕೋಟಿ ರೂ. ಘೋಷಣೆ ವಿರುದ್ಧವಾಗಿ ಇದು ಬರೀ ಬೋಗಸ್ ಎಂದು ಘೋಷಣೆ ಕೂಗಿದ್ದು ಈ ಸಂದರ್ಭದಲ್ಲಿ ತಪ್ಪು ಘೋಷಣೆ ಹಾಕಿದವರನ್ನು ಕೂಡಾ ತರಾಟೆಗೆ ತೆಗೆದುಕೊಂಡು ಗದರಿಸಿ ಪ್ಯಾಕೇಜ್ ಘೋಷಣೆ ಮಾತ್ರ ಆಗಿದ್ದು ಬಿಡುಗಡೆಯಾಗಿಲ್ಲ ಸರಿಯಾಗಿ ಘೋಷಣೆ ಹಾಕಿ ಎಂದು ಆಕ್ರೋಶಗೊಂಡಿದ್ದು ಇದನ್ನು ನೋಡಿದ ಶಿವಕುಮಾರ್ ಅವಕ್ಕಾದರು.