ನವದೆಹಲಿ, ಮೇ 20 (DaijiworldNews/SM): ಕಳೆದ ಎರಡು ತಿಂಗಳಿಂದ ರದ್ದಾಗಿದ್ದ ವಿಮಾನ ಹಾರಾಟ ಇದೀಗ ಅತೀ ಅಗತ್ಯ ಹಿನ್ನೆಲೆಯಲ್ಲಿ ವಿಶೇಷ ವಿಮಾನಗಳ ಹಾರಾಟದ ಮೂಲಕ ಅಂತರಾಶ್ಟ್ರೀಯ ಮಟ್ಟದಲ್ಲಿ ಆರಂಭಗೊಂಡಿದೆ. ಇದೀಗ ದೇಶಿಯ ವಿಮಾನ ಹಾರಾಟಕ್ಕೂ ಗ್ರೀನ್ ಸಿಗ್ನಲ್ ಸಿಕ್ಕಿದೆ.
ದೇಶದೊಳಗೆ ವಿಮಾನ ಹಾರಾಟಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಇದೇ ತಿಂಗಳಲ್ಲಿ ವಿಮಾನ ಹಾರಾಟ ಆರಂಭಗೊಳ್ಳಲಿದ್ದು, ಮೇ 25 ರ ಬಳಿಕ ವಿಮಾನ ಹಾರಾಟಕ್ಕೆ ಅನುಮತಿ ನೀಡಲಾಗಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.
ಈ ಸಂಬಂಧ ವಿಮಾನಯಾನ ಸಂಸ್ಥೆಗಳು, ವಿಮಾನ ನಿಲ್ದಾಣಗಳಿಗೆ ಮಾಹಿತಿ ರವಾನಿಸಲಾಗಿದೆ. ಇನ್ನು ಕೊರೊನಾ ಹಿನ್ನೆಲೆಯಲ್ಲಿ ಮಾರ್ಚ್ 25 ರಿಂದ ಎಲ್ಲಾ ರೀತಿಯಲ್ಲಿ ದೇಶಿ ಹಾಗೂ ವಿದೇಶೀ ವಿಮಾನ ಹಾರಾಟವನ್ನು ಕೇಂದ್ರ ಸರಕಾರ ರದ್ದುಗೊಳಿಸಲಾಗಿತ್ತು. ಇದೀಗ ವಿಮಾನ ಹಾರಾಟಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಸರಕಾರದ ನಿಯಮದಂತೆ ಹಾಗೂ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಬಳಸಿಕೊಂಡು ವಿಮಾನಯಾನ ಆರಂಭಗೊಳ್ಳಲಿದೆ.