ಬೆಂಗಳೂರು, ಮೇ 21 (Daijiworld News/MB) : ಎಪಿಎಂಸಿ ತಿದ್ದುಪಡಿ ಕಾಯ್ದೆ ರೈತ ವಿರೋಧಿಯಾಗಿದೆ ಎಂದು ದೃಢಪಟ್ಟಲ್ಲಿ ಅದನ್ನು ಹಿಂಪಡೆಯಲು ಸಿದ್ಧರಿದ್ದೇವೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು.
ಬುಧವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ತಿದ್ದುಪಡಿಯಿಂದಾಗಿ ರೈತರಿಗೆ ಅನುಕೂಲವೇ ಹೊರತು ಹಾನಿಯಲ್ಲ. ಆದರೆ ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಈ ವಿಷಯದಲ್ಲಿ ರಾಜಕಾರಣ ಮಾಡುತ್ತಿದ್ದು ರೈತರಿಗೆ ಅನಾನೂಕೂಲ ಯಾವುದು ಎಂದು ಇವರು ತೋರಿಸಲಿ ಎಂದು ಸವಾಲು ಹಾಕಿದರು.
ಇನ್ನು ಕಬಡ್ಡಿ, ಈಜು, ಜಿಮ್ನಲ್ಲಿ ಫಿಟ್ನೆಸ್ ಬಿಟ್ಟು ಉಳಿದ ಎಲ್ಲ ಕ್ರೀಡಾ ಚಟುವಟಿಕೆಗಳಿಗೆ ಮತ್ತು ಅಭ್ಯಾಸಕ್ಕೆ ಅವಕಾಶವಿದೆ. ಕೆಲವು ಕ್ರೀಡಾ ಕ್ಲಬ್ಗಳಿಗೆ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. ಆದರೆ ಪ್ರೇಕ್ಷರಿಗೆ ಅವಕಾಶ ನೀಡದಂತೆ ಸೂಚಿಸಲಾಗಿದೆ. ಹಾಗೆಯೇ ಮೇ 31 ರವರೆಗೆ ಕ್ರೀಡಾ ಕ್ಲಬ್ಗಳಲ್ಲಿ ರಿಕ್ರಿಯೇಷನ್, ರೆಸ್ಟೋರೆಂಟ್ಗಳಿಗೆ ಅವಕಾಶ ಇರುವುದಿಲ್ಲ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಆಡಿದರೂ ಕಡ್ಡಾಯವಾಗಿ ಮಾಸ್ಕ್ ಹಾಕಬೇಕು. ಸಾಮಾಜಿಕ ಅಂತರ ಕಾಯ್ದುಕೊಂಡು ಆಡಬಲ್ಲ ಎಲ್ಲಾ ಆಟಗಳಿಗೆ ಅವಕಾಶ ನೀಡಲಾಗಿದೆ. ಮಾಸ್ಕ್, ಸ್ಯಾನಿಟೈಸರ್ ಬಳಕೆ ಕಡ್ಡಾಯ ಎಂದು ಹೇಳಿದರು.
ಇನ್ನು ಆಟಗಾರರ ಥರ್ಮಲ್ ಸ್ಕ್ರೀನಿಂಗ್ ಬಳಿಕವೇ ಆಟಕ್ಕೆ ಅವಕಾಶ ನೀಡಬೇಕು. ಆಟಗಾರರು ಟವೆಲ್, ಟಿಷ್ಯೂ ಪೇಪರ್ಗಳನ್ನು ವ್ಯಕ್ತಿಗತವಾಗಿ ಬಳಸಬೇಕು. ಕ್ರೀಡಾಂಗಣ ಮತ್ತು ಅಲ್ಲಿನ ಶೌಚಾಲಯಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು.