ನವದೆಹಲಿ, ಮೇ 21 (DaijiworldNews/PY) : ಜೂನ್ 1ರಿಂದ ಸಂಚಾರ ಪ್ರಾರಂಭ ಮಾಡುವ ಪಟ್ಟಿಯನ್ನು ಬುಧವಾರ ರೈಲ್ವೆ ಇಲಾಖೆಯು ಬಿಡುಗಡೆ ಮಾಡಿದ್ದು, ಆನ್ಲೈನ್ ಮೂಲಕ ಟಿಕೆಟ್ ಬುಕ್ಕಿಂಗ್ ಅನ್ನು ಇಂದು ಬೆಳಿಗ್ಗೆ 10 ರಿಂದ ಮಾಡಬಹುದಾಗಿದೆ.
ಸಾಂದರ್ಭಿಕ ಚಿತ್ರ
ಮೊಬೈಲ್ ಆ್ಯಪ್ ಅಥವಾ ಐಆರ್ಸಿಟಿಸಿ ವೆಬ್ಸೈಟ್ ಮೂಲಕ ಇ-ಟಿಕೆಟ್ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಎಲ್ಲವೂ ಕೂಡಾ ಕಾಯ್ದಿರಿಸಿದ ಟಿಕೇಟ್ಗಳೇ ಆಗಿರುತ್ತವೆ. ಸ್ಥಳದಲ್ಲಿ ಟಿಕೇಟ್ ನೀಡುವುದು ಅಥವಾ ತಾತ್ಕಾಲಿಕ ಬುಕ್ಕಿಂಗ್ಗಳಿಗೆ ಅವಕಾಶವಿಲ್ಲ. ಅಲ್ಲದೇ, ಟಿಕೇಟ್ಗಳು ಯಾವುದೇ ರೈಲು ನಿಲ್ದಾಣದ ಕೌಂಟರ್ಗಳಲ್ಲಿ ಲಭ್ಯವಿಲ್ಲ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಟಿಕೇಟ್ಗಳನ್ನು ಗರಿಷ್ಠ 30 ದಿನಗಳವರೆಗೆ ಕಾಯ್ದಿರಿಸಬಹುದು. ನೋಂದಣಿ ಮಾಡಿದಂತ ಟಿಕೇಟ್ ರದ್ದು ಪಡಿಸುವುದಕ್ಕೆ ಸಂಬಂಧಪಟ್ಟಂತೆ ನಿಯಮಗಳನ್ನು ರೂಪಿಸಲಾಗುತ್ತದೆ. ಇನ್ನು ವೆಯ್ಟಿಂಗ್ ಲಿಸ್ಟ್ ಟಿಕೇಟ್ ಇರುವವರಿಗೆ ಪ್ರಯಾಣ ಮಾಡಲು ಅವಕಾಶವಿಲ್ಲ ಎಂದೂ ಹೇಳಲಾಗಿದೆ.
ರೈಲ್ವೆ ಇಲಾಖೆ ಬುಧವಾರ ಜೂನ್ 1ರಿಂದ ಸಂಚಾರ ಮಾಡಲಿರುವ 100 ರೈಲುಗಳ ಪಟ್ಟಿಯನ್ನು ಪ್ರಕಟಿಸಿತ್ತು. ಈ ರೈಲುಗಳಲ್ಲಿ ಎ.ಸಿ ಹಾಗೂ ಎ.ಸಿ ರಹಿತ ಕೋಚ್ಗಳು ಇರಲಿವೆ ಎನ್ನಲಾಗಿದೆ.