ನವದೆಹಲಿ, ಮೇ 21 (Daijiworld News/MB) : ವಲಸೆ ಕಾರ್ಮಿಕರ ತೊಂದರೆಗಳಿಗೆ ಸ್ಪಂಧಿಸುವ ನಿಟ್ಟಿನಲ್ಲಿ ಸರ್ಕಾರ ಶೀಘ್ರದಲ್ಲೇ ಪ್ಯಾನ್-ಇಂಡಿಯಾ ಸಹಾಯವಾಣಿ ಪ್ರಾರಂಭಕ್ಕೆ ಮುಂದಾಗಿದೆ.
ಮುಖ್ಯ ಕಾರ್ಮಿಕ ಆಯುಕ್ತರ ಅಡಿಯಲ್ಲಿ ಆರಂಭಿಸಲಾಗುತ್ತಿರುವ ಈ ಸಹಾಯವಾಣಿಯ ಕರೆ ದರವನ್ನು ಕರೆ ಮಾಡಿದವರಿಗೆ ವಿಧಿಸಲಾಗುತ್ತದೆ. ದೆಹಲಿಯ ಕಚೇರಿಯಲ್ಲಿ ಇಡೀ ಭಾರತದ ವಲಸೆ ಕಾರ್ಮಿಕರ ಸಮಸ್ಯೆ ಆಲಿಸಿ ಸ್ಥಳೀಯ ಕಂಟ್ರೋಲ್ ರೂಂಗಳಿಗೆ ಸಂಪರ್ಕಿಸಿ ಸಮಸ್ಯೆಯ ಬಗ್ಗೆ ತಿಳಿಸಲಾಗುತ್ತದೆ. ಎಂದು ದೂರಸಂಪರ್ಕ ಇಲಾಖೆ ತಿಳಿಸಿದೆ.
ವಲಸೆ ಕಾರ್ಮಿಕರ ಕುಂದುಕೊರತೆಗಳನ್ನು ನಿಭಾಯಿಸಲು ಮುಖ್ಯ ಕಾರ್ಮಿಕ ಆಯುಕ್ತರ ಕಚೇರಿಗೆ 14445 ಎಂಬ ಸಣ್ಣ ಕೋಡ್ನ್ನು ನೀಡಲಾಗುತ್ತದೆ. ವಲಸೆ ಕಾರ್ಮಿಕರಿಗೆ ಈ ಕೋಡ್ ಸಂಖ್ಯೆ ಲಭ್ಯವಾಗುವಂತೆ ನೋಡಿಕೊಳ್ಳುವುದು ದೂರ ಸಂಪರ್ಕ ಇಲಾಖೆಯ ಕಾರ್ಯವಾಗಿದ್ದು ಈ ಕರೆಗೆ ದರ ವಿಧಿಸಲಾಗುತ್ತದೆ.
ಇನ್ನು ತುರ್ತು ಸೇವೆಗೆ ದೂರಸಂಪರ್ಕ ಇಲಾಖೆ 1930 ಮತ್ತು 1944 ಸಹಾಯವಾಣಿಯನ್ನು ನೀಡಿದೆ.