ನವದೆಹಲಿ, ಮೇ 21 (Daijiworld News/MSP): ಹೊಸ ಕೇಂದ್ರಾಡಳಿತ ಪ್ರದೇಶ ಲಡಾಕ್ ನ ಪ್ಯಾಂಗೊಂಗ್ ತ್ಸೋ ಸರೋವರ ಮತ್ತು ಗಾಲ್ವಾನ್ ಕಣಿವೆ ಪ್ರದೇಶಗಳ ಗಡಿ ಭಾಗದಲ್ಲಿ ಚೀನಾ- ಭಾರತದ ನಡುವೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ಇದರ ಪರಿಣಾಮ ಭಾರತ ಮತ್ತು ಚೀನಾ ಹೆಚ್ಚುವರಿ ಸೇನಾಪಡೆಗಳನ್ನು ಗಡಿಯಲ್ಲಿ ನಿಯೋಜಿಸಿದೆ. ಭಾರತ ಮತ್ತು ಚೀನಾ ನಡುವೆ ಕಳೆದ 60 ವರ್ಷಗಳಿಂದ ಗಲ್ವಾನ್ ಪಾಯಿಂಟ್ ನಲ್ಲಿಕಿತ್ತಾಟ ನಡೆಯುತ್ತಿದೆ. ಇದೀಗ ಚೀನಾ ಪ್ಯಾಂಗೊಂಗ್ ತ್ಸೋ ಸರೋವರ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಹೆಚ್ಚುವರಿ ದೋಣಿಗಳನ್ನು ನಿಯೋಜಿಸಿದೆ ಎಂದು ತಿಳಿದುಬಂದಿದೆ.
ಕೊರೊನಾ ಕಾರಣದಿಂದ ಈಗಾಗಲೇ ಚೀನಾದ ಮೇಲೆ ಅಸಮಾಧಾನ ಹೊಂದಿರುವ ಅಮೇರಿಕಾವು, " ಚೀನಾ ಸೇನೆಯ ಆಕ್ರಮಣಕಾರಿ ನಡೆ , ಚೀನಾ ಒಡ್ಡಿದ ಬೆದರಿಕೆ ನೆನಪನ್ನು ಮರುಕಳಿಸುತ್ತದೆ ಎಂದು ಹೇಳಿದೆ.
ಇನ್ನು ಗಡಿಯಲ್ಲಿ ಭುಗಿಲೆದ್ದಿರುವ ಉದ್ವಿಗ್ನ ವಾತಾವರಣ ಪರಿಸ್ಥಿತಿಯನ್ನು ಭಾರತದ ಉನ್ನತ ಮಿಲಿಟರಿ ಸೇನೆ ನಿರಂತರವಾಗಿ ಮೇಲ್ವಿಚಾರಣೆ ನಡೆಸುತ್ತಿದೆ.