ಶಿಮ್ಲಾ, ಮೇ 21 (Daijiworld News/MB) : ಕೊರೊನಾ ಲಾಕ್ಡೌನ್ ಕಾರಣದಿಂದಾಗಿ ಮದುವೆ ದಿಬ್ಬಣವೊಂದು ಪಶ್ಚಿಮ ಬಂಗಾಳದಲ್ಲಿ 56 ದಿನಗಳ ಕಾಲ ಸಿಲುಕಿದ್ದು ಇದೀಗ ಹಿಮಾಚಲ ಪ್ರದೇಶಕ್ಕೆ ಹಿಂದಿರುಗಿದೆ.
ಮಾರ್ಚ್ 25ರಂದು ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯ ಕಾಶಿಪುರ ಗ್ರಾಮದಲ್ಲಿ ಸಂಜೋಗಿತಾ ಎಂಬವರೊಂದಿಗೆ ಸುನೀಲ್ ಕುಮಾರ್ ಎಂಬವರ ವಿವಾಹವನ್ನು ನಿಗದಿಪಡಿಸಲಾಗಿದ್ದು ಮಾರ್ಚ್ 21ರಂದು 17 ಜನರನ್ನು ಒಳಗೊಂಡ ಮದುವೆ ದಿಬ್ಬಣ ಗುರ್ಮುಖಿ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲಿನ ಮೂಲಕ ತೆರಳಿದ್ದು ಮಾರ್ಚ್ 22ರಂದು ಕೊಲ್ಕತ್ತಾಗೆ ತಲುಪಿದ್ದರು. ಅದೇ ದಿನ ದೇಶದಾದ್ಯಂತ ಜನತಾ ಕರ್ಫ್ಯೂ ಇದ್ದ ಕಾರಣದಿಂದಾಗಿ ಈ ದಿಬ್ಬಣ ಅಲ್ಲೇ ಬಾಕಿಯಾಗಿದ್ದು ಮೇ 14 ರಂದು ರಾಜ್ಯ ಸರ್ಕಾರದಿಂದ ಇ-ಪಾಸ್ ಪಡೆದ ಬಳಿಕ ಮರಳಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಮದುಮಗ 30 ವರ್ಷದ ಸುನೀಲ್ ಕುಮಾರ್, ವಿವಾಹವಾದ ಮರುದಿನವೇ ಹಿಂದಿರುಗುವ ಬಗ್ಗೆ ಈ ತೀರ್ಮಾನಿಸಿ ಟಿಕೆಟ್ ಕೂಡಾ ಬುಕ್ ಮಾಡಲಾಗಿತ್ತು. ಆದರೆ ಲಾಕ್ಡೌನ್ ಕಾರಣದಿಂದಾಗಿ 50 ದಿನಗಳವರೆಗೆ ಇದು ಧರ್ಮಶಾಲಾದಲ್ಲಿ ಇರಬೇಕಾಯಿತು. ಪಶ್ಚಿಮ ಬಂಗಾಳ ಸಹಾಯವಾಣಿಯನ್ನು ಸಂಪರ್ಕಿಸಿದಾಗ ಯಾವುದೇ ಸಹಾಯ ದೊರೆಯಲಿಲ್ಲ. ಕೊನೆಗೆ ನಾವು ಎಂದು ಹೇಳಿದ್ದಾರೆ. ಹಿಮಾಚಲ ಪ್ರದೇಶದ ಸಚಿವ ವೀರೇಂದ್ರ ಕನ್ವರ್ ಅವರನ್ನು ಸಂಪರ್ಕಿಸಿದ್ದು ಅವರು ನಮಗೆ ಪಡಿತರ ದೊರೆಯುವಂತೆ ಮಾಡಿದರು ಎಂದು ಹೇಳಿದ್ದಾರೆ.