ಬೆಂಗಳೂರು, ಮೇ 21 (DaijiworldNews/PY) : ಕರ್ನಾಟಕವು ಕೊರೊನಾ ಪರೀಕ್ಷಾ ಸಾಮರ್ಥ್ಯವನ್ನು ನಿರಂತರವಾಗಿ ಹೆಚ್ಚಿಸಿಕೊಳ್ಳುತ್ತಿದೆ. ಮೇ ಅಂತ್ಯದ ವೇಳೆಗೆ 60 ಲ್ಯಾಬ್ಗಳನ್ನು ಹೊಂದುವ ಗುರಿಯನ್ನು ನಾವು ತಲುಪಲಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವರು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕರ್ನಾಟಕವು ತನ್ನ ಕೊರೊನಾ ಪರೀಕ್ಷಾ ಸಾಮರ್ಥ್ಯವನ್ನು ನಿರಂತರವಾಗಿ ಹೆಚ್ಚಿಸಿಕೊಳ್ಳುತ್ತಿದೆ. ನಿನ್ನೆ 7293 ಪರೀಕ್ಷೆಗಳನ್ನು ನಡೆಸಲಾಗಿದ್ದು, ಇದುವರೆಗಿನ ಅತ್ಯಧಿಕ ಏಕದಿನ ಪರೀಕ್ಷೆಯಾಗಿದೆ. ಇಂದಿಗೆ 53 ಪರೀಕ್ಷಾ ಲ್ಯಾಬ್ಗಳು ಕಾರ್ಯನಿರ್ವಹಿಸುತ್ತಿದ್ದು, ಮೇ ಅಂತ್ಯದ ವೇಳೆಗೆ 60 ಲ್ಯಾಬ್ಗಳನ್ನು ಹೊಂದುವ ಗುರಿಯನ್ನು ನಾವು ತಲುಪಲಿದ್ದೇವೆ ಎಂದು ತಿಳಿಸಿದ್ದಾರೆ.
ಕೊರೊನಾ ಸೋಂಕು ನಿಯಂತ್ರಣ ಮಾಡಲು ಸೋಂಕು ಪತ್ತೆ ಪರೀಕ್ಷೆಯೂ ಕೂಡಾ ಮುಖ್ಯವಾಗಿದೆ. ಅಧಿಕ ಲ್ಯಾಬ್ಗಳ ಮೂಲಕ ಹೆಚ್ಚು ಪರೀಕ್ಷೆಗಳು ಆಗಬೇಕಾಗಿರುವುದು ಅಗತ್ಯ ಎನ್ನುವು ತಜ್ಞರ ಅಭಿಪ್ರಾಯವಾಗಿದೆ.