ನವದೆಹಲಿ, ಮೇ 21 (Daijiworld News/MSP): ಕೋವಿಡ್ -19 ಹರಡುವುದನ್ನು ತಡೆಯಲು ವಿಧಿಸಲಾದ ಲಾಕ್ಡೌನ್ ಕಾರಣಕ್ಕೆ ಎರಡು ತಿಂಗಳ ಹಿಂದೆ ಸ್ಥಗಿತಗೊಂಡಿದ್ದ ದೇಶೀಯ ವಿಮಾನಯಾನಗಳನ್ನು ಮೇ 25 ರಿಂದ ದೇಶೀಯ ವಿಮಾನಯಾನಗಳನ್ನು ಪುನರಾರಂಭಿಸಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದ್ದು, ಪ್ರಯಾಣಿಕರ ಸಂಚಾರಕ್ಕಾಗಿ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ಸ್ (ಎಸ್ಒಪಿ) ಬಿಡುಗಡೆ ಮಾಡಿದೆ.
ಈ ಪ್ರಕಾರ ಪ್ರಯಾಣಿಕರು ಎರಡು ಗಂಟೆಗಳ ಮುಂಚಿತವಾಗಿ ವಿಮಾನ ನಿಲ್ದಾಣಕ್ಕೆ ತಲುಪಬೇಕಾಗಿರುತ್ತದೆ, ಆರೋಗ್ಯ ಸೇತು ಕಡ್ಡಾಯ ಹಾಗೂ ಪ್ರಯಾಣಿಕರು ಕೈಗವಸು ಹಾಗೂ ಮಾಸ್ಕ್ ಧರಿಸಿರಬೇಕಾಗುತ್ತದೆ ಹೀಗೆ ಹಲವಾರು ಹೊಸ ಮಾರ್ಗಸೂಚಿಗಳು ವಿಮಾನ ನಿಲ್ದಾಣ ಪ್ರಾಧಿಕಾರ ಬಿಡುಗಡೆಗೊಳಿಸಿದೆ.
ದೇಶೀಯ ವಿಮಾನಗಳಲ್ಲಿ ಹಾರಾಟಕ್ಕೆ ಪ್ರಯಾಣಿಕರು ಅನುಸರಿಸಬೇಕಾದ ಹೊಸ ಮಾರ್ಗಸೂಚಿ:
- ಮುಂದಿನ ನಾಲ್ಕು ಗಂಟೆಗಳ ಒಳಗೆ ಹಾರಾಟ ನಡೆಸುವವರಿಗೆ ಮಾತ್ರ ಟರ್ಮಿನಲ್ ಕಟ್ಟಡಕ್ಕೆ ಪ್ರವೇಶಿಸಲು ಅವಕಾಶವಿರುತ್ತದೆ
- ವಿಮಾನ ನಿಲ್ದಾಣಕ್ಕೆ ಪ್ರವೇಶಿಸುವ ಮುನ್ನ ಪ್ರಯಾಣಿಕರ ಥರ್ಮಲ್ ಸ್ಕ್ರೀನಿಂಗ್, ಪ್ರಯಾಣಿಕರ ಲಗ್ಗೇಜು ಟರ್ಮಿನಲ್ ಗೆ ಪ್ರವೇಶಿಸುವ ಮುನ್ನ ಶುಚಿಗೊಳಿಸಬೇಕಾಗುತ್ತದೆ.
- ಆರೋಗ್ಯಾ ಸೇತುನಲ್ಲಿಆಪ್ ನಲ್ಲಿ ‘ಹಸಿರು’ ತೋರಿಸದವರಿಗೆ ವಿಮಾನ ನಿಲ್ದಾಣಕ್ಕೆ ಪ್ರವೇಶಿಸಲು ಅವಕಾಶವಿಲ್ಲ
- ಟ್ರಾಲಿ ಬಳಸುವಂತಿಲ್ಲ.ಕೋರಿಕೆಯ ಮೇಲೆ ಆಯ್ದ ಕೆಲವು ಪ್ರಯಾಣಿಕರಿಗೆ ಮಾತ್ರ ಟ್ರಾಲಿ ಬಳಕೆಗೆ ಲಭ್ಯ
- ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಕುಳಿತುಕೊಳ್ಳುವ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಕ್ತ ವ್ಯವಸ್ಥೆ ಮಾಡಬೇಕು
- ಏರ್ ಪೋರ್ಟ್ ನಲ್ಲಿರುವ ಮಳಿಗೆಗಳಲ್ಲಿ ಡಿಜಿಟಲ್ ಪಾವತಿ, ಸೆಲ್ಫ್ ಆರ್ಡರಿಂಗ್ ಬೂತ್ ಗಳಿಗೆ ಹೆಚ್ಚು ಉತ್ತೇಜನ
- ಬೂಟುಗಳ ಕೊಳಕು ನಿವಾರಣೆ ಮಾಡಲು ಪ್ರವೇಶ ದ್ವಾರದ ಬಳಿ ಬ್ಲೀಚ್ನಲ್ಲಿ ನೆನೆಸಿದ ಮ್ಯಾಟ್ಸ್ ಇರಿಸಲಾಗುವುದು.
- ಎಲ್ಲಾ ವಿಮಾನ ನಿಲ್ದಾಣದ ಸಿಬ್ಬಂದಿಗಳು ಪಿಪಿಇ ಬಳಕೆ ಮಾಡಬೇಕು ಮತ್ತು ಪ್ರಯಾಣಿಕರು ಹ್ಯಾಂಡ್ ಸ್ಯಾನಿಟೈಸರ್ ಕಡ್ಡಾಯವಾಗಿ ಇಟ್ಟುಕೊಳ್ಳಬೇಕು.