ಬೆಂಗಳೂರು, ಮೇ 21 (Daijiworld News/MB) : ರಾಜ್ಯದಲ್ಲಿ ಮೇ 20ರ ಸಂಜೆ 5ರಿಂದ ಮೇ 21ರ ಮಧ್ಯಾಹ್ನ 12ರ ವರೆಗೂ 116 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು ಸೋಂಕಿತರ ಸಂಖ್ಯೆ 1,578ಕ್ಕೆ ಏರಿಕೆಯಾಗಿದೆ.
ಉತ್ತರ ಕನ್ನಡದ ಶಿರಸಿಯಲ್ಲಿ 9, ಉಡುಪಿ ಜಿಲ್ಲೆಯಲ್ಲಿ 25 (+2 ಕಾರವಾರ), ಮಂಡ್ಯ 15, ಗದಗ 2, ವಿಜಯಪುರ 1, ಬೆಳಗಾವಿ 9, ಧಾರವಾಡ 5, ಕಾರವಾರದಲ್ಲಿ 9, ಬೆಂಗಳೂರಿನಲ್ಲಿ 6, ಹಾಸನದಲ್ಲಿ 13, ಶಿವಮೊಗ್ಗ ಮತ್ತು ದಕ್ಷಿಣ ಕನ್ನಡದಲ್ಲಿ ತಲಾ 6 ಹಾಗೂ ಬಳ್ಳಾರಿಯಲ್ಲಿ 11 ಮಂದಿಗೆ ಸೋಂಕು ದೃಢಪಟ್ಟಿದೆ.
ಬಾಗಲಕೋಟೆಯಲ್ಲಿ 6, ದಾವಣಗೆರೆಯಲ್ಲಿ 5 ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂವರು ಸೇರಿ ಒಟ್ಟು 14 ಮಂದಿ ಕೊರೊನಾ ಸೋಂಕಿತರು ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ಈವರೆಗೆ ಒಟ್ಟು 570 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ ರಾಜ್ಯದ ನಿಗದಿತ ಆಸ್ಪತ್ರೆಗಳಲ್ಲಿ 966 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿನಿಂದಾಗಿ ಒಟ್ಟು 41 ಮಂದಿ ಸಾವನ್ನಪ್ಪಿದ್ದಾರೆ.
ಇನ್ನು ದೃಢಪಟ್ಟ ಹೊಸ ಕೊರೊನಾ ಪ್ರಕರಣಗಳಲ್ಲಿ ಹೆಚ್ಚಾಗಿ ಅಂತರ್ ರಾಜ್ಯ ಪ್ರಯಾಣದ ಹಿನ್ನಲೆ ಉಳ್ಳವರಾಗಿದ್ದಾರೆ. ಮಹಾರಾಷ್ಟ್ರದ ಮುಂಬೈ, ಪುಣೆ, ಘಲ್ಘರ್, ಮಲ್ಲಚಾಂದಿವಲ್ಲೀ, ಸಾಯಿಲ್ ಮೊದಲಾದ ಪ್ರದೇಶದಿಂದ, ಜಾರ್ಖಂಡ್, ರಾಜಸ್ತಾನದ ಅಜ್ಮೀರ್, ತಮಿಳುನಾಡು, ತೆಲಂಗಾಣ, ಹೈದರಾಬಾದ್ ರಾಜ್ಯ ಪ್ರಯಾಣದ ಹಿನ್ನಲೆಯಿದೆ.