ನವದೆಹಲಿ, ಮೇ 21 (Daijiworld News/MB) : ಮಾಜಿ ಪ್ರಧಾನಿ, ದಿವಂಗತ ರಾಜೀವ್ ಗಾಂಧಿ ಅವರ 29ನೇ ಪುಣ್ಯಸ್ಮರಣೆ ದಿನ ಇಂದಾಗಿದ್ದು ಅವರ ಪುತ್ರಿ ಪ್ರಿಯಾಂಕ ಗಾಂಧಿ ವಾದ್ರಾ ಚಿತ್ರವನ್ನು ಟ್ವೀಟ್ ಮಾಡಿ "ತಂದೆಯೊಂದಿಗಿನ ಕೊನೆಯ ಚಿತ್ರ" ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
ನಿಮಲ್ಲಿ ನಿರ್ಧಯಿಯಾಗಿರುವವರಿಗೆ ದಯೆ ತೋರುವುದು, ಜೀವನವು ನ್ಯಾಯಯುವಾಗಿದೆಯೇ ಎಂದು ತಿಳಿಯಲು, ನಿಮ್ಮನ್ನು ಅನ್ಯಾಯವಾಗಿ ಚಿತ್ರಿಸಿದರೂ, ಆಕಾಶ ಗಾಢಾಂಧಕಾರದಲ್ಲಿದ್ದರೂ ಚಂಡಮಾರುತದ ಭಯಭೀತರಾಗಿದ್ದರೂ ಮುನ್ನಡೆಯುವ ಹೃದಯ ಹಾಗೂ ಹೃದಯದಲ್ಲಿ ದುಃಖಗಳಿದ್ದರೂ ಪ್ರೀತಿಯಿಂದಿರುವುದು ಇದು ನನ್ನ ತಂದೆಯಿಂದ ನನಗೆ ದೊರೆತ ಉಡುಗೊರೆಗಳು ಎಂದು ಭಾವಾನಾತ್ಮಕವಾಗಿ ತನ್ನ ತಂದೆಯೊಂದಿಗಿರುವ ಫೋಟೋ ಟ್ವೀಟ್ ಮಾಡಿದ್ದಾರೆ.
ಇನ್ನು ರಾಹುಲ್ ಗಾಂಧಿ ಕೂಡಾ ತನ್ನ ತಂದೆಯನ್ನು ನೆನಪಿಸಿಕೊಂಡಿದ್ದು, 1991 ರಲ್ಲಿ ಈ ದಿನ ಅವರು ಹುತಾತ್ಮರಾದರು. ಮೃದು ಸ್ವಭಾವದ, ಕರುಣಾಮಯಿಯಾಗಿದ್ದ ಅವರನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ, ಅವರು ನನ್ನ ಹೃದಯದಲ್ಲಿ ಜೀವಂತವಾಗಿದ್ದಾರೆ. ನನ್ನ ಜೀವನದಲ್ಲಿ ಮರೆಯಲಾರದ ನೆನಪುಗಳಲ್ಲಿ ಅವರು ಒಬ್ಬರು ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಇಂದಿರಾ ಗಾಂಧಿ ಹತ್ಯೆ ನಡೆದ ನಂತರ ರಾಜೀವ್ ಗಾಂಧಿ ದೇಶದ ಪ್ರಧಾನಿಯಾಗಿದ್ದು 1984 ರಿಂದ 1989 ರವರೆಗೆ ಆಡಳಿತ ನಡೆಸಿದ್ದರು. 1991ರ ಮೇ 21ರಂದು ರಾಜೀವ್ ಗಾಂಧಿ ಹತ್ಯೆಗೀಡಾದರು.