ನವದೆಹಲಿ, ಮೇ 21 (DaijiworldNews/PY) : ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಅವರು ತಮ್ಮ ತಂದೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪುಣ್ಯ ತಿಥಿ ಅಂಗವಾಗಿ ಗೌರವ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ನಿಜವಾದ ದೇಶಭಕ್ತ, ಉದಾರವಾದಿ ಹಾಗೂ ಲೋಕೋಪಕಾರಿ ತಂದೆಯ ಮಗನಾಗಿರುವುದಕ್ಕೆ ನನಗೆ ಹೆಮ್ಮೆ ಇದೆ ಎಂದು ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಅವರು ಟ್ವೀಟ್ನಲ್ಲಿ ಉಲ್ಲೇಖಸಿದ್ದಾರೆ.
ಈ ಬಗ್ಗೆ ಟ್ವೀಟ್ನಲ್ಲಿ ಬರೆದುಕೊಂಡಿರುವ ಅವರು, ದೇಶವನ್ನು ಪ್ರಧಾನ ಮಂತ್ರಿಯಾಗಿ ರಾಜೀವ್ ಗಾಂಧಿ ಅವರು ಪ್ರಗತಿಯ ಹಾದಿಯಲ್ಲಿ ಕೊಂಡೊಯ್ದಿದ್ದಾರೆ. ಅವರು ರಾಷ್ಟ್ರವನ್ನು ಸಬಲೀಕರಣಗೊಳಿಸಲು ಅಗತ್ಯವಾದ ಹಾಗೂ ಪೂರಕವಾದ ಕ್ರಮಗಳನ್ನು ತೆಗೆದುಕೊಂಡಿದ್ಧಾರೆ. ಅವರ ಈ ಪುಣ್ಯ ತಿಥಿಯಂದು ಅವರಿಗೆ ನಾನು ಪ್ರೀತಿ ಹಾಗೂ ಕೃತಜ್ಞತೆಯಿಂದ ನಮಸ್ಕರಿಸುತ್ತೇನೆ ಎಂದಿದ್ದಾರೆ.
1991 ರ ಮೇ. 21 ರಂದು ರಾಜೀವ್ ಗಾಂಧಿ ಅವರು ಚುನಾವಣಾ ಪ್ರಚಾರದ ಸಲುವಾಗಿ ತಮಿಳುನಾಡಿನ ಶ್ರೀಪೆರಂಬದೂರ್ಗೆ ತೆರಳಿದ್ದರು. ಈ ಸಂದರ್ಭ, ಅವರು ಎಲ್ಟಿಟಿಇ ಮಾನವ ಬಾಂಬ್ ದಾಳಿಗೆ ಬಲಿಯಾಗಿದ್ದರು.
ಪ್ರಧಾನಿ ಮೋದಿ ಹಾಗೂ ಅನೇಕ ನಾಯಕರು ರಾಜೀವ್ ಗಾಂಧಿ ಪುಣ್ಯತಿಥಿಯ ಅಂಗವಾಗಿ ಅವರಿಗೆ ಶ್ರದ್ದಾಂಜಲಿ ಸಲ್ಲಿಸಿದ್ದಾರೆ.