ನವದೆಹಲಿ, ಮೇ 21 (Daijiworld News/MSP): ಸ್ವಿಗ್ಗಿ ಮನೆ ಬಾಗಿಲಿಗೆ ಮದ್ಯವನ್ನು ತಲುಪಿಸುವ ಸೇವೆಯನ್ನು ಆರಂಭಿಸಿದೆ. ಸ್ವಿಗ್ಗಿ ಆಪ್ ನಲ್ಲಿನ ವೈನ್ ಶಾಪ್ ವಿಭಾಗದ ಮೂಲಕ ಈ ಸೇವೆಯನ್ನು ಜಾರ್ಖಂಡ್ ನಲ್ಲಿ ಮೊದಲಿಗೆ ಆರಂಭಿಸಿದೆ.
ಜಾರ್ಖಂಡ್ ರಾಜ್ಯ ಸರ್ಕಾರದ ಅನುಮತಿ ಪಡೆದ ನಂತರ ರಾಜಧಾನಿ ರಾಂಚಿಯಲ್ಲಿ ಮನೆ ಬಾಗಿಲಿಗೆ ಮದ್ಯ ಸೇವೆಯನ್ನು ಪ್ರಾರಂಭಿಸಿದೆ. ಈ ಸೇವೆ ಶೀಘ್ರದಲ್ಲೇ ವಾರದೊಳಗೆ ಇತರ ರಾಜ್ಯದಲ್ಲೂ ಪ್ರಾರಂಭಿಸುವುದಾಗಿ ತಿಳಿಸಿದೆ.
ಇದಕ್ಕಾಗಿ ಈಗಾಗಲೇ ವಿವಿಧ ರಾಜ್ಯ ಸರ್ಕಾರಗಳೊಂದಿಗೆ ಸ್ವಿಗ್ಗಿ ಮಾತುಕತೆ ನಡೆಸುತ್ತಿದ್ದು ಸರ್ಕಾರಗಳಿಂದ ಅನುಮತಿ ದೊರೆತ ತಕ್ಷಣ ಅಲ್ಲಿಯೂ ಈ ಸೇವೆಯನ್ನು ಆರಂಭಿಸಲಾಗುತ್ತದೆ ಸ್ವಿಗ್ಗಿ ಸಂಸ್ಥೆ ತಿಳಿಸಿದೆ.
ಮದ್ಯವನ್ನು ಮನೆಗೆ ಸರಬರಾಜು ಮಾಡುವ ಸಂದರ್ಭದಲ್ಲಿ ಅಲ್ಲಿನ ಕಾನೂನುಗಳನ್ನು ಪಾಲನೆ ಮಾಡುವುದಾಗಿ ಸ್ವಿಗ್ಗಿ ತಿಳಿಸಿದೆ ಇದಕ್ಕಾಗಿ ಸ್ವಿಗ್ಗಿ ಮದ್ಯಕ್ಕೆ ಆರ್ಡರ್ ಮಾಡುವವರ ವಯಸ್ಸು, ಬಳಕೆದಾರರ ಅಧಿಕೃತತೆ ಪರಿಶೀಲನೆ ಸೇರಿದಂತೆ ಮತ್ತಿತರೆ ಮಾನದಂಡಗಳನ್ನು ಅನುಸರಿಸುತ್ತದೆ ಎಂದು ಹೇಳಿಕೊಂದಿದೆ
ಮದ್ಯಕ್ಕಾಗಿ ಬೇಡಿಕೆ ಸಲ್ಲಿಸುವ ಗ್ರಾಹಕರು ತಮ್ಮ ವಯಸ್ಸನ್ನು ದೃಢೀಕರಣ ಮಾಡುವ ಸರ್ಕಾರದ ಗುರುತಿನ ಚೀಟಿ ಮತ್ತು ತಮ್ಮ ಸೆಲ್ಫಿಯನ್ನು ಅಪ್ ಲೋಡ್ ಮಾಡಬೇಕು. ಎಲ್ಲಾ ಆರ್ಡರ್ ಗಳಿಗೆ ವಿನೂತನವಾದ ಒಟಿಪಿ ಇರಲಿದೆ. ಡೆಲಿವರಿ ಸಂದರ್ಭದಲ್ಲಿ ಈ ಒಟಿಪಿಯನ್ನು ನೀಡಬೇಕಾಗುತ್ತದೆ. ರಾಜ್ಯ ಸರ್ಕಾರದ ಮಿತಿಗಿಂತ ಹೆಚ್ಚು ಪ್ರಮಾಣದ ಮದ್ಯವನ್ನು ಗ್ರಾಹಕರು ಆರ್ಡರ್ ಮಾಡುವಂತಿಲ್ಲ ಎಂದು ಸ್ವಿಗ್ಗಿ ತಿಳಿಸಿದೆ.