ನವದೆಹಲಿ, ಮೇ 22(Daijiworld News/MSP): ಭಾರತೀಯ ರೈಲ್ವೆ ಇಲಾಖೆಯು ಮಹತ್ವ ಆದೇಶ ಹೊರಡಿಸಿದ್ದು ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ್ದು, ಶುಕ್ರವಾರದಿಂದ ಆಯ್ದ ರೈಲ್ವೆ ನಿಲ್ದಾಣಗಳಲ್ಲಿ ಟಿಕೆಟ್ ಬುಕ್ಕಿಂಗ್ ಕೌಂಟರ್ ತೆರೆಯಲಿದೆ.
ಕೊರೊನಾ ಲಾಕ್ ಡೌನ್ ನಿಂದ ಸುಮಾರು ಎರಡು ತಿಂಗಳ ಬಳಿಕ ಶ್ರಮಿಕ್ ರೈಲು ಹೊರತುಪಡಿಸಿ ಜೂನ್ 1ರಿಂದ ಹೆಚ್ಚುವರಿಯಾಗಿ 200 ವಿಶೇಷ ರೈಲುಗಳನ್ನು ಬಿಡಲಾಗುವುದು ಎಂದು ಭಾರತೀಯ ರೈಲ್ವೆ ಇಲಾಖೆ ಘೋಷಿಸಿದೆ. ಆದರೆ ಇಲ್ಲಿಯವರೆಗೆ ರೈಲ್ವೆ ನಿಲ್ದಾಣದ ರಿಸರ್ವೇಶನ್ ಕೌಂಟರ್ ನಲ್ಲಿ ಟಿಕೆಟ್ ಬುಕ್ಕಿಂಗ್ ಮಾಡಲು ಅವಕಾಶ ನೀಡಿರಲಿಲ್ಲ.
ಕೊರೊನಾ ಕಾರಣದಿಂದ ಸ್ಥಗಿತಕೊಂಡಿದ್ದ ಭಾರತವನ್ನು ಹಿಂದಿನ ಸಹಜ ಚಟುವಟಿಕೆಗೆ ತೆರೆಯಲು ರೈಲ್ವೆ ಸಂಚಾರ ಕೂಡ ಆರಂಭಿಸಬೇಕಾಗಿದೆ . ಇಂದಿನಿಂದ ಕಾಯ್ದಿರಿಸಿದ ಟಿಕೆಟ್ಗಳ ಬುಕ್ಕಿಂಗ್ / ರದ್ದತಿ ಅಂಚೆ ಕಚೇರಿಗಳು, ಯಾತ್ರಿ ಟಿಕೆಟ್ ಸುವಿದಾ ಕೇಂದ್ರ ಪರವಾನಗಿದಾರರು ಮತ್ತು ಐಆರ್ಸಿಟಿಸಿಯ ಅಧಿಕೃತ ಏಜೆಂಟರ ಮೂಲಕ ಮತ್ತು ಪ್ರಯಾಣಿಕರ ಮೀಸಲಾತಿ ವ್ಯವಸ್ಥೆಯ ಮೀಸಲಾತಿ ಕೇಂದ್ರಗಳು ಮತ್ತು ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಲಭ್ಯವಿರುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ರೈಲು ಸಂಚಾರ ಸೇವೆ ಆರಂಭಿಸಲಿದ್ದು ಸದ್ಯದಲ್ಲಿಯೇ ಪ್ರಕಟಿಸಲಾಗುವುದು ಎಂದು ರೈಲ್ವೆ ಖಾತೆ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.