ಶಿವಮೊಗ್ಗ, ಮೇ 22 (DaijiworldNews/PY) : ಶಾಸಕರು, ಸಚಿವರು, ಸಂಸದರು ಕೊರೊನಾ ಭಯದಿಂದ ಮನೆಯಲ್ಲಿಯೇ ಇದ್ದರೆ ಅಭಿವೃದ್ದಿ ಕಾಮಗಾರಿಗಳು ನಡೆಯುವುದಾದರೂ ಹೇಗೆ. ಕೊರೊನಾ ಎದುರಿಸುತ್ತೇನೆ ಎನ್ನುವ ಆತ್ಮಸ್ಥೈರ್ಯವಿರಬೇಕು. ಅಲ್ಲದೇ, ಜಾಗರೂಕತೆಯೂ ಇರಬೇಕು. ಕೊರೊನಾ ರಾಕ್ಷಸರಿಗೆ ಬರುವುದಿಲ್ಲ. ನನ್ನಂತವನಿಗಂತೂ ಸೋಂಕು ಬರುವುದಿಲ್ಲ ಎಂದು ಎಂದು ಸಚಿವ ಕೆ. ಎಸ್ ಈಶ್ವರಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಡೀ ಪ್ರಪಂಚವೇ ನಾಯಕ ಎಂದು ಒಪ್ಪಿಕೊಂಡಿದೆ. ಪ್ರಧಾನಮಂತ್ರಿ ಪರಿಹಾರ ನಿಧಿಗೆ ಜನ ಲಕ್ಷಾಂತರ ರೂಪಾಯಿ ಹಣವನ್ನು ದೇಣಿಗೆಯಾಗಿ ನೀಡುತ್ತಿದ್ದಾರೆ. ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷ ಕೊರೊನಾ ವಿಚಾರವಾಗಿ ಒಂದಾಗಿ ಹೋರಾಟ ನಡೆಸುತ್ತಿದೆ. ಈ ಸಂದರ್ಭ ಸೋನಿಯಾ ಗಾಂದಿ ಅವರ ಹೇಳಿಕೆಯಿಂದ ಎಲ್ಲರಿಗೂ ನೋವಾಗಿದೆ ಎಂದು ತಿಳಿಸಿದರು.
ಸಾಗರದ ಒಬ್ಬ ವಕೀಲ ತನ್ನ ಕಾರ್ಯವನ್ನು ಆತ ನಿರ್ವಹಿಸಿದ್ದಾನೆ. ಸಿಚಿವ ಸಂಪುಟದಲ್ಲಿ ಸಬ್ ಇನ್ಸ್ಪೆಕ್ಟರ್ ಹಾಕಿರುವ ಎಫ್ಐಆರ್ ಸರಿಯೋ ತಪ್ಪೋ ಎಂಬುದಾಗಿ ಚರ್ಚೆ ನಡೆಸುತ್ತೇನೆ. ನಾನು ಸೋನಿಯಾ ಗಾಂಧಿ ಅವರ ಹೇಳೀಕೆಯನ್ನು ವಾಪಾಸ್ ಪಡೆಯಲಿ ಎಂದು ಹೇಳುವುದಿಲ್ಲ ಎಂದರು.